ಮಗ SSLC ಪರೀಕ್ಷೆಯಲ್ಲಿ ಫೇಲ್ ➤ ಆತ್ಮಹತ್ಯೆಗೆ ಶರಣಾದ ತಂದೆ

(ನ್ಯೂಸ್ ಕಡಬ) newskadaba.com ಕೊಡಗು . ಆ,25:  ಮಗ SSLC ಪರೀಕ್ಷೆಯಲ್ಲಿ ಫೇಲಾದ ಎಂಬ ಬೇಸರದಿಂದ ತಂದೆಯೊಬ್ಬ ನೇಣಿಗೆ ಶರಣಾಗಿರುವ ಘಟನೆ ಸೋಮವಾರಪೇಟೆ ತಾಲೂಕಿನ ಚೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ.

39 ವರ್ಷದ ತಂದೆ, ಕೂಲಿ ಕಾರ್ಮಿಕ ರಘು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಪತ್ನಿಯ ವೇಲ್ ಬಳಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. SSLC  ಪರೀಕ್ಷೆಯ ನಾಲ್ಕು ವಿಷಯದಲ್ಲಿ ಮಗ ಪ್ರಶಾಂತ್​ ಅನುತೀರ್ಣನಾಗಿದ್ದ. ಮಗ ಫೇಲ್ ಆಗಿದ್ದಕ್ಕೆ ತಂದೆ ಕುಡಿತದ ದಾಸನಾಗಿದ್ದ ಎಂದು ಆತನ ಪತ್ನಿ ಮಂಜುಳಾ ಹೇಳಿದ್ದಾರೆ.ಘಟನಾ ಸ್ಥಳಕ್ಕೆ ಸಿದ್ದಾಪುರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ರೈತ ಸಮುದಾಯಕ್ಕೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್

 

 

error: Content is protected !!
Scroll to Top