ಸ್ಕೇಟಿಂಗ್ ರಿಂಕ್: ಇ ಟೆಂಡರ್ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 24. ತೋಟಗಾರಿಕೆ ಇಲಾಖೆಯು ಕದ್ರಿ ಉದ್ಯಾನವನದಲ್ಲಿ ಸ್ಕೇಟಿಂಗ್ ರಿಂಕ್ ಅನ್ನು ಒಡಂಬಡಿಕೆ ಮೂಲಕ ಕ್ರೀಡಾ ಸಂಸ್ಥೆ/ಸಂಘ/ಕ್ಲಬ್/ತರಬೇತುದಾರರು ವಹಿಸಲು ಹಾಗೂ ಗರಿಷ್ಠ ಮೊತ್ತದ ಬಳಕೆ ಶುಲ್ಕ ಸರಕಾರಕ್ಕೆ ಪಾವತಿಸಲು ಅವಕಾಶವಾಗುವಂತೆ ಆಸಕ್ತ ಸಂಸ್ಥೆ / ಸಂಘ / ಕ್ಲಬ್ / ತರಬೇತುದಾರರುಗಳಿಂದ ಆಸಕ್ತಿ ವ್ಯಕ್ತಪಡಿಸಲು ಕರ್ನಾಟಕ ಸರಕಾರದ ಇ-ಪ್ರೋಕ್ಯೂರ್‍ಮೆಂಟ್ ಪೋರ್ಟಲ್ ಮೂಲಕ ಆಹ್ವಾನಿಸಲಾಗಿದೆ.

ಇ-ಪ್ರೋಕ್ಯೂರ್‍ಮೆಂಟ್ ಪೋರ್ಟಲ್ ಮೂಲಕ ಸಲ್ಲಿಸಲು ಸೆಪ್ಟೆಂಬರ್ 4 ರಂದು ಸಂಜೆ 4 ಗಂಟೆ ಕೊನೆಯ ದಿನ. ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, ರಾಜ್ಯ ವಲಯ, ಮಂಗಳೂರು, ದೂರವಾಣಿ ಸಂಖ್ಯೆ 0824 2444298 ಸಂಪರ್ಕಿಸುವಂತೆ  ಪ್ರಕಟಣೆ ತಿಳಿಸಿದೆ.

Also Read  ಬೆಳ್ತಂಗಡಿ: ಗಾಂಜಾ ಸಾಗಾಟ ➤ ಆರೋಪಿಗಳಿಬ್ಬರ ಬಂಧನ

error: Content is protected !!
Scroll to Top