ತೆಂಗು, ಅಡಿಕೆ ಫಸಲು – ಇ ಹರಾಜು

(ನ್ಯೂಸ್ ಕಡಬ) ಮಂಗಳೂರು, ಆ. 24. 2020-21ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮದ್ದಡ್ಕ, ತುಂಬೆ, ಹೊಸಗದ್ದೆ ತೋಟಗಾರಿಕೆ ಕ್ಷೇತ್ರಗಳಲ್ಲಿನ ತೆಂಗು / ಅಡಿಕೆ ಫಸಲಿನ ಇ-ಹರಾಜು 2ನೇ ಕರೆ  ಮೂಲಕ ವಿಲೇವಾರಿ ಮಾಡಲಾಗುತ್ತದೆ. ಇ-ಹರಾಜು ಸೆಪ್ಟೆಂಬರ್ 3 ರಂದು  ಸಂಜೆ 4 ಗಂಟೆಗೆ ಮುಕ್ತಾಯಗೊಳ್ಳಲಿದೆ. (ಇ-ಹರಾಜು ಪ್ರಕಟಣೆ ಸಂ.ಕೆ.ಎಸ್.ಹೆಚ್.ಡಿ.:/ಹರಾಜು/2020-21/2601/2602/2603). ಆಸಕ್ತರು ಹರಾಜಿನಲ್ಲಿ ಭಾಗವಹಿಸಬಹುದು.

ವಿಲೇವಾರಿ ಷರತ್ತುಗಳು ಹಾಗೂ ಹೆಚ್ಚಿನ ವಿವರಗಳನ್ನು  e.procurement.kar.in  ನಿಂದ ಪಡೆಯಬಹುದು. ಹಾಗೂ ಸದರಿ ಫಸಲಿಗೆ ಟೆಂಡರ್ ಮೂಲಕ ಇದೇ ದಿನಾಂಕಗಳಿಗೆ ಪ್ರಕಟಣೆಯನ್ನು ಹೊರಡಿಸಲಾಗಿದೆ. ಆಸಕ್ತರು ಒಂದು ಅಥವಾ ಎರಡೂ ಟೆಂಡರ್ ಹರಾಜಿನಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಟೆಂಡರ್ ಕಂ ಹರಾಜು ಮೂಲಕ ಹರಾಜಿನಲ್ಲಿ ಭಾಗವಹಿಸಲು ಇಚ್ಚಿಸುವವರು ಟೆಂಡರನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು. ಟೆಂಡರ್ ಸಲ್ಲಿಸಲು ಸೆಪ್ಟೆಂಬರ್ 2 ಕೊನೆಯ ದಿನ. ಇ-ಹರಾಜು ಮತ್ತು ಟೆಂಡರ್ ಹರಾಜಿನಲ್ಲಿ ಭಾಗವಹಿಸಿದ ಬಿಡ್ಡುದಾರರು ಯಾರು ಅಧಿಕ ಬಿಡ್ಡನ್ನು ನಮೂದಿಸಿರುತ್ತಾರೊ ಆ ಮೊತ್ತವನ್ನು ಮಾನ್ಯ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, ರಾಜ್ಯ ವಲಯ, ಮಂಗಳೂರು-575002 ದೂರವಾಣಿ ಸಂಖ್ಯೆ 0824:2444298 ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Also Read  ಪುತ್ತೂರು: ಕಾರಿನಲ್ಲಿ ತಲವಾರು ಪತ್ತೆ ಪ್ರಕರಣ - ನಾಲ್ವರಿಗೆ ನ್ಯಾಯಾಂಗ ಬಂಧನ

error: Content is protected !!
Scroll to Top