ಕೊಂಕಣಿ ನಾಟಕಕಾರ ‘ಬೆನ್ನ ರುಜೈ’ ನಿಧನ

(ನ್ಯೂಸ್ ಕಡಬ) newskadaba.com ಮಂಗಳೂರು, . 24. ಕೊಂಕಣಿ ರಂಗಭೂಮಿ ಪ್ರಿಯರಿಗೆ “ಬೆನ್ನ ರುಜೈ” ಎಂದೇ ಜನಪ್ರಿಯವಾಗಿರುವ ಕೊಂಕಣಿ ನಾಟಕ ಕಾರ್ಯಕರ್ತ ಮತ್ತು ನಾಟಕಕಾರ ಬೆನೆಡಿಕ್ಟ್ ಮಿರಾಂದ ಇಂದು ನಿಧನರಾದರು.

ಮಾರ್ಚ್ 21, 1946 ರಂದು ಜನಿಸಿದ ಇವರು, ಪ್ರಸಿದ್ಧ ನಾಟಕಕಾರ ಹಾಗೂ ಪತ್ರಕರ್ತರೂ ಹೌದು. ಅವರು ಕಳೆದ 5 ದಶಕಗಳಿಂದ ಹಲವಾರು ಕೊಂಕಣಿ ಜನಪ್ರಿಯ ನಾಟಕಗಳಲ್ಲಿ ನಟಿಸಿದ್ದಾರೆ. ನಾಟಕಕಾರನಾಗಿ ಅವರು ಅನೇಕ ಸಾಮಾಜಿಕ ಮತ್ತು ಧಾರ್ಮಿಕ ನಾಟಕಗಳನ್ನು ಬರೆದು ಪ್ರದರ್ಶಿಸಿದ್ದಾರೆ. ಅವರು ಒಟ್ಟು ಐದು ಸಾಮಾಜಿಕ ನಾಟಕಗಳು, ಎಂಟು ಧಾರ್ಮಿಕ ನಾಟಕಗಳು, ಎಂಟು ಹಾಸ್ಯ ಕಿರು ನಾಟಕಗಳು ಮತ್ತು ಆರು ಕವನಗಳನ್ನ ಬರೆದಿದ್ದಾರೆ. ಪತ್ರಕರ್ತರಾಗಿದ್ದ ಇವರು ಎರಡು ವರ್ಷಗಳ ಕಾಲ ಮಾಯ್-ಗವ್ನ್ ಎಂಬ ಕೊಂಕಣಿ ಮಾಸಿಕದ ಉಪ ಸಂಪಾದಕರಾಗಿದ್ದರು. ಇನ್ನು ಅವರ ಪತ್ನಿ ಥೆರೆಸಾ ಮಿರಾಂದಾ ಅವರು ಕೂಡಾ ರಂಗಭೂಮಿ ಕಲಾವಿದರಾಗಿದ್ದರು. ಬೆನ್ನ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಇಂದು ನಡೆಯಲಿದ್ದು, ಮಧ್ಯಾಹ್ನ 3 ರಿಂದ ಜೆಪ್ಪು ಚಾಪೆಲ್‌ನಲ್ಲಿ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ. ಸಂಜೆ 4 ಗಂಟೆಗೆ ಜೆಪ್ಪುವಿನ  ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

Also Read  ಎಸ್ಸಿ/ಎಸ್ಟಿ ಫ್ರೀ ಮೆಟ್ರಿಕ್ ವಿದ್ಯಾರ್ಥಿ ವೇತನ: ಅರ್ಜಿ ಆಹ್ವಾನ

error: Content is protected !!
Scroll to Top