ಮಂಗಳೂರು: ಕುಟುಂಬಿಕರಿಂದ ಅಂತ್ಯಸಂಸ್ಕಾರಕ್ಕೆ ಸಿದ್ದತೆ ನಡೆಯಿತ್ತಿದ್ದ ವೇಳೆ ಏಕಾಏಕಿ ಕೋಮಾದಿಂದ ಎದ್ದ ವೃದ್ದೆ

(ನ್ಯೂಸ್ ಕಡಬ) ಮೂಡುಬಿದಿರೆ, ಆ. 24. ಕಳೆದ ಹಲವು ದಿನಗಳಿಂದ ಕೋಮಾ ಸ್ಥಿತಿಗೆ ಜಾರಿದ್ದ ವೃದ್ದೆಯೋರ್ವರು ಇನ್ನು ಬದುಕುವುದು ಕಷ್ಟಸಾಧ್ಯ ಎಂದು ವೈದ್ಯರು ಹೇಳಿದ್ದರಿಂದ ಕುಟುಂಬಸ್ಥರು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದ ವೇಳೆ ಕುತೂಹಲಕಾರಿ ಘಟನೆಯೊಂದು ಸಂಭವಿಸಿದೆ.

ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಪಟ್ಟೆಮನೆಯ ಹೇಮಾವತಿ ರೈ (80) ಎಂಬವರು  ಕೋಮಾಕ್ಕೆ ಜಾರಿ ಮರಣಾವಸ್ಥೆಯಲ್ಲಿದ್ದ ಇವರು ಇನ್ನು ಬದುಕುವುದು ಕಷ್ಟವೆಂದು ವೈದ್ಯರು ಹೇಳಿ ಮನೆಗೆ ಕರೆದೊಯ್ಯುವಂತೆ ತಿಳಿಸಿದ್ದರು. ಆಕೆಯ ಸಂಬಂಧಿಕರು ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ  ಕೊನೆಗಳಿಗೆಯಲ್ಲಿ ಆಂಬುಲೆನ್ಸ್‌ ಮೂಲಕ ಮನೆಗೆ ಕರೆತರುವಾಗ ಚೇತರಿಸಿಕೊಂಡಿದ್ದಾರೆ. ಇವರನ್ನು ಇದೀಗ ಮನೆಯಲ್ಲಿಯೇ ಆರೈಕೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

Also Read  ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಗ್ರಾಮ ಪಂಚಾಯತ್ ನಲ್ಲಿ ನೋಡಲ್ ಅಧಿಕಾರಿ ನೇಮಕ

 

error: Content is protected !!
Scroll to Top