(ನ್ಯೂಸ್ ಕಡಬ) newskadaba.com ಮಂಡ್ಯ, ಸೆ.16, ರೆಡ್ ಮೀ ನೋಟ್ 4 ಮೊಬೈಲ್ ಫೋನೊಂದು ಬ್ಲಾಸ್ಟ್ ಆಗಿರೋ ಘಟನೆ ಮಂಡ್ಯದಲ್ಲಿ ನಡೆದಿದೆ.
ರೆಡ್ ಮೀ ನೋಟ್ 4 ಬ್ಲಾಸ್ಟ್ ಆಗಿರುವ ದೃಶ್ಯವು ಮೊಬೈಲ್ ಅಂಗಡಿಯಲ್ಲಿ ಅಳವಡಿಸಿದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮಂಡ್ಯದ ಗ್ರಾಹಕರೊಬ್ಬರು ಆನ್ಲೈನ್ನಲ್ಲಿ ರೆಡ್ ಮಿ ನೋಟ್ 4 ಸ್ಮಾರ್ಟ್ ಫೋನ್ ಬುಕ್ ಮಾಡಿದ್ದರು. ಮೊಬೈಲ್ ಆನ್ ಆಗುತ್ತಿಲ್ಲ ಎಂದು ಆರ್ಪಿ ರಸ್ತೆಯ ಮೊಬೈಲ್ ಅಂಗಡಿಗೆ ತಂದು ತೋರಿಸಿದ್ದಾರೆ.
ಅಂಗಡಿಯವರು ಮೊಬೈಲ್ ಆನ್ ಮಾಡಲು ಯತ್ನಿಸಿದಾಗ ಹೊಗೆ ಕಾಣಿಸಿಕೊಂಡಿದೆ. ಕೂಡಲೇ ಅಂಗಡಿಯವರು ಮೊಬೈಲ್ ಕೆಳಕ್ಕೆ ಹಾಕುತ್ತಿದ್ದಂತೆ ಬ್ಲಾಸ್ಟ್ ಆಗಿದೆ. ಈ ಘಟನೆಯಿಂದ ಕೆಲ ಸಮಯ ಮೊಬೈಲ್ ಕೊಂಡುಕೊಂಡ ಗ್ರಾಹಕ ಮತ್ತು ಅಂಗಡಿಯವರು ಆತಂಕಗೊಂಡಿದ್ದರು.