ಬೆಳ್ತಂಗಡಿ: ತಂದೆಯನ್ನೆ ಹತ್ಯೆಗೈದ ಪಾಪಿ ಪುತ್ರ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ. ಆ,24: ಇಲ್ಲಿನ‌ ಜೂನಿಯರ್ ಕಾಲೇಜು ಬಳಿ ನಿವಾಸಿ ಟೂರಿಸ್ಟ್ ಕಾರು ಚಾಲಕ ವಾಸು ಎಂಬವರಿಗೆ ಅವರ‌ ಪುತ್ರನ ನೇತೃತ್ವದಲ್ಲೇ ಮೂರು ಮಂದಿಯ ತಂಡ ತಲವಾರಿನಿಂದ ಮಾರಣಾಂತಿಕವಾಗಿ ಹಲ್ಲೆಗೈದ ಪರಿಣಾಮ ಅವರು ಮೃತಪಟ್ಟ ಘಟನೆ‌ ಇಂದು ಬೆಳಗ್ಗೆ ನಡೆದಿದೆ.

ನಗರದ ಪಂಚಾಯತ್ ವ್ಯಾಪ್ತಿಯ ಜ್ಯೂನಿಯರ್ ಕಾಲೇಜ್ ರಸ್ತೆ ಬಳಿಯ ನಿವಾಸಿ ಹಿರಿಯ ಚಾಲಕ ವಾಸು ಮೂಲ್ಯ (65) ಮೇಲೆ ದಾಳಿ ಮಾಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಟ್ಯಾಕ್ಸಿ ಚಾಲಕ ಮೃತ ಪಟ್ಟಿದ್ದಾರೆ .ವಾಸು ಮೂಲ್ಯ ರವರು ವೃತ್ತಿಯಲ್ಲಿ ಟ್ಯಾಕ್ಸಿ ವಾಹನದ ಚಾಲಕರಾಗಿ ಕೆಲಸ‌ ಮಾಡುತ್ತಿದ್ದರು.ಘಟನೆ ನಡೆದ ಸ್ಥಳದಲ್ಲಿ ಕೃತ್ಯಕ್ಕೆ ಬಳಸಿದ ತಲವಾರ್ ಪತ್ತೆಯಾಗಿದೆ. ವಾಸು ಮೂಲ್ಯ ಅವರ ಎರಡನೇ ಮಗ ದಯಾನಂದ (38) ಈ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗುತ್ತಿದೆ.

Also Read  ಕಡಲ ತೀರದ ಸ್ವಚ್ಛತೆ ಪ್ರತಿಯೊಬ್ಬರ ಆದ್ಯ ಕರ್ತವ್ಯ- ಡಾ|| ಚೂಂತಾರು ಪಣಂಬೂರು ಕಡಲ ತೀರದಲ್ಲಿ ಸ್ವಚ್ಛತಾ ಅಭಿಯಾನ

ಆದರೆ ಮಗ ಕೂಡ ಚಾಲಕ ವೃತ್ತಿ ನಿರ್ವಹಿಸುತ್ತಿದ್ದು, ಮದ್ಯಪಾನ ಮಾಡಿ ತಂದೆ ಜೊತೆ ಗಲಾಟೆ ಮಾಡಿ ಈ ಹಿಂದೆ ಪ್ರಕರಣವು ಠಾಣೆಯ ಮೆಟ್ಟಿಲೇರಿತ್ತು. ನಿನ್ನೆ ರಾತ್ರಿ ಮನೆಯಲ್ಲಿದ್ದ ಮಗ ದಯಾನಂದ ಇಂದು ಬೆಳಗ್ಗೆ ನಾಪತ್ತೆಯಾಗಿದ್ದು, ಮೊಬೈಲ್ ಸ್ವಿಚ್ ಆಫ್ ಬರುತ್ತಿರುವುದರಿಂದ ಅನುಮಾನ ವ್ಯಕ್ತವಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ಪಿಎಸ್‌ಐ ನಂದಕುಮಾರ್, ಇನ್ಸ್‌ಪೆಕ್ಟರ್ ಸಂದೇಶ್.ಪಿ.ಜಿ. ಭೇಟಿ ನೀಡಿ ಪರೀಶೀಲನೆ ನಡೆಸಿದರು.

 

error: Content is protected !!
Scroll to Top