ಸಿ.ಎಂ. ಸಿದ್ಧರಾಮಯ್ಯ ರವರ ಭ್ರಷ್ಟಾಚಾರ ಶೀಘ್ರದಲ್ಲಿ ಬಯಲು ‌‌► ಬಿ.ಎಸ್.ಯಡಿಯೂರಪ್ಪ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.16, ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದವರ ಹಾಗು ಕಾಂಗ್ರೆಸ್ ಶಾಸಕರು ನಡೆಸಿದ ಭ್ರಷ್ಟಾಚಾರ ಕುರಿತಾದ  ದಾಖಲೆಗಳ ಬಿಡುಗಡೆಯ ಮುಹೂರ್ತವನ್ನು  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಇದೇ ತಿಂಗಳ 23ರಂದು ನಿಗದಿಪಡಿಸಿದ್ದಾರೆ.

ಕಳೆದ ಹಲವು ದಿನಗಳಿಂದ ಸಿದ್ದರಾಮಯ್ಯ ವಿರುದ್ಧ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಯಡಿಯೂರಪ್ಪ ಹೇಳಿದ್ದ ಮಾತಿಗೆ ಇದೀಗ ಕಾಲ ಒದಗಿಬಂದಿದೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರ ರಹಿತ ಹಾಗೂ ಪಾರದರ್ಶಕ ಆಡಳಿತ ನೀಡುವುದಾಗಿ ಪದೇ ಪದೇ ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಸಂಪುಟದ ಸಚಿವರು, ಶಾಸಕರು ನಡೆಸಿರುವ ಭ್ರಷ್ಟಾಚಾರದ ಕರ್ಮಕಾಂಡವನ್ನು ಬಯಲು ಮಾಡುತ್ತೇನೆ ಎಂದರು.

Also Read  ರಾಮಕುಂಜ: ರಸ್ತೆ ಕಾಂಕ್ರಿಟೀಕರಣಕ್ಕೆ ಶಾಸಕ ಅಂಗಾರರಿಂದ ಶಿಲಾನ್ಯಾಸ

ತಾನು ಭ್ರಷ್ಟಾಚಾರ ಪ್ರಕರಣ ಕುರಿತು ದಾಖಲೆ ಬಿಡುಗಡೆ ಮಾಡುವುದಾಗಿ ಹೇಳುತ್ತಿದ್ದಂತೆಯೇ ಬೆಚ್ಚಿ ಬಿದ್ದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಬಂಧಪಟ್ಟ ಕಡತಗಳನ್ನು ನಾಪತ್ತೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರಾತ್ರೋರಾತ್ರಿ ಕಡತಗಳನ್ನು ಮಾಯ ಮಾಡಲಾಗುತ್ತಿದೆ. ಆದರೂ ನಮ್ಮದೇ ಆದ ಮೂಲಗಳಿಂದ ಕೆಲವು ದಾಖಲೆಗಳನ್ನು ಸಂಗ್ರಹಿಸಿದ್ದೇವೆ ಎಂದು ಯಡಿಯೂರಪ್ಪ ಹೇಳಿದರು.

error: Content is protected !!
Scroll to Top