ಒಬ್ಬ ವಿದ್ಯಾರ್ಥಿಗೆ ಮುಂದಿನ ವಿದ್ಯಾಭ್ಯಾಸಕ್ಕೆಂದು ಸ್ಕಾಲರ್ ಶಿಪ್ ಹಣ ನೀಡಿ ➤ ಮಾದರಿ ಎನಿಸಿಕೊಂಡಿದ್ದ ಬಿಎಸ್ಸಿ ವಿದ್ಯಾರ್ಥಿನಿ.

(ನ್ಯೂಸ್ ಕಡಬ) newskadaba.com ಸುಳ್ಯ. ,23: ಡಿಸ್ಟಿಂಕ್ಷನ್ ಮಾರ್ಕ್‍ನೊಂದಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತೇರ್ಗಡೆಯಾದ ಅಜ್ಜಾವರ ಪ್ರೌಢ ಶಾಲಾ ವಿದ್ಯಾರ್ಥಿ,ಅಜ್ಜಾವರ ಬಯಂಬು ಕಾಲನಿಯ ರಮೇಶ್- ಜಾನಕಿ ದಂಪತಿಗಳ ಪುತ್ರ ರಕ್ಷಿತ್ ಬಿ.ಆರ್. ರವರ ಮುಂದಿನ ವಿದ್ಯಾಭ್ಯಾಸಕ್ಕೆ ತನಗೆ ಬಂದ್ದಿದ್ದ ಸ್ಕಾಲರ್ ಶಿಪ್ ಹಣ ನೀಡಿ ವಿದ್ಯಾರ್ಥಿಯೊಬ್ಬಳು ಮಾದರಿ ಎನಿಸಿಕೊಂಡಿದ್ದಾಳೆ.

ರಕ್ಷಿತ್ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 563 ಅಂಕ ಪಡೆದು ಡಿಸ್ಟಿಂಕ್ಷನ್‍ನಲ್ಲಿ ತೇರ್ಗಡೆಯಾಗಿದ್ದಾರೆ. ಬಡ ಕುಟುಂಬದ ಹುಡುಗನಾದ ರಕ್ಷಿತ್‍ನ ಸಾಧನೆಯನ್ನು ನೋಡಿದ ನೇಲ್ಯಡ್ಕದ ಅಬ್ದುಲ್ ಕುಂಇಯವರ ಪುತ್ರಿ ಪುತ್ತೂರು ವಿವೇಕಾನಂದ ವಿದ್ಯಾಸಂಸ್ಥೆಯ ಅಂತಿಮ ಪದವಿ ವಿದ್ಯಾರ್ಥಿನಿ ತನಗೆ ದ್ವಿತೀಯ ಪದವಿಯಲ್ಲಿ ಸರಕಾರದಿಂದ ದೊರೆತ ಸ್ಕಾಲರ್ ಶಿಪ್ ಹಣ ನೀಡಿ, ರಕ್ಷಿತ್ ನನ್ನು ಗೌರವಿಸಿ, ಇದನ್ನು ಮುಂದಿನ ವಿದ್ಯಾಭ್ಯಾಸಕ್ಕೆ ಬಳಸುವಂತೆ ಹೇಳಿದ್ದಾರೆಂದು ತಿಳಿದುಬಂದಿದೆ. ರಕ್ಷಿತ್ ನ ಮನೆಗೆ ಹೋಗಿ ಆತನನ್ನು ಮುಮ್ತಾಜ್ ಗೌರವಿಸಿದ ಸಂದರ್ಭದಲ್ಲಿ ಸುಳ್ಯ ಎ.ಪಿ.ಎಂ.ಸಿ. ನಿರ್ದೇಶಕ ನಾರಾಯಣ ಬಂಟ್ರಬೈಲ್ ಜತೆಗಿದ್ದರು.

Also Read  ವಿಶ್ವ ಸ್ನೂಕರ್ ಚಾಂಪಿಯನ್ ಶಿಪ್- ಕೋಲಾರದ ಕೀರ್ತನಾ ಪಾಂಡಿಯನ್ ಗೆ ಕಂಚಿನ ಪದಕ

“ಅಜ್ಜಾವರ ಶಾಲೆಗೆ ಶೇ.41 ಫಲಿತಾಂಶ ಬಂದಿದೆ.ರಕ್ಷಿತ್ ಬಡಕುಟುಂಬದ ಹುಡುಗ. ಆತನ ಸಾಧನೆ ಕಂಡು ಖುಷಿಯಾಯಿತು.ಏನು ನೀಡುವುದೆಂದು ಯೋಚಿಸಿದಾಗ ನನ್ನಲ್ಲಿ ಕಳೆದ ವರ್ಷ ಸ್ಕಾಲರ್ ಶಿಪ್ ನಲ್ಲಿ ಬಂದ ಹಣ ಇತ್ತು. ಅದನ್ನು ವಿದ್ಯಾಭ್ಯಾಸಕ್ಕೆ ಬಳಸುವಂತೆ ಹೇಳಿ ನೀಡಿದ್ದೇನೆ. ಮುಂದೆ ಆತನನಿಗೆ ಮೆಡಿಕಲ್ ಫೀಲ್ಡ್ ನ ಒಲವಿದೆಯಂತೆ.ಇದಕ್ಕೆ ಸಹೃದಯರು ಸಹಕರಿಸಬೇಕಾಗಿದೆ” ಎಂದು ವಿದ್ಯಾರ್ಥಿನಿ ಮುಮ್ತಾಜ್‍ಗೆ ತಿಳಿಸಿದ್ದಾರೆ.

 

error: Content is protected !!
Scroll to Top