ಗಣೇಶ ಹಬ್ಬ ಆಚರಣೆ ಹಿನ್ನಲೆ ➤ ದುರ್ಗಂಬಿಕಾ ಅಮ್ಮನವರ ಸನ್ನಿಧಿಯಲ್ಲಿ ಗಣಹೋಮ ,ವಿಶೇಷ ಪೂಜೆ

(ನ್ಯೂಸ್ ಕಡಬ) newskadaba.com ಕಡಬ . ಆ,22: ದುರ್ಗಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ವಿಶೇಷ ಗಣಹೋಮ ಹಾಗೂ ಕಡಬ ಶ್ರೀಕಂಠ ಮಹಾ ಗಣಪತಿ ದೇವಸ್ಥಾನದಲ್ಲಿ ತೆನೆ ವಿತರಣೆ ಹಾಗೂ ಪೂಜಾ ಕಾರ್ಯಕ್ರಮ ನಡೆಯಿತು.

ಕಳೆದ 47 ವರ್ಷಗಳಿಂದ ಕಡಬ ಧಾರ್ಮಿಕ ಉತ್ಸವ ಸಮಿತಿ ವತಿಯಿಂದ ಆಚರಿಸಿಕೊಂಡು ಬರುತ್ತಿದ್ದ ಕಡಬ ಸಾರ್ವಜನಿಕ ಗಣೇಶೋತ್ಸವವನ್ನು ಕೊರೋನ ಸಮಸ್ಯೆಯಿಂದಾಗಿ ಈ ಬಾರಿ ಸರಳ ರೀತಿಯಲ್ಲಿ ಗಣಪತಿ ಹೋಮ ಮಾಡುವ ಮೂಲಕ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ಆಚರಿಸಲಾಯಿತು. ಅತೀ ಕಡಿಮೆ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದು, ಸಾಮಾಜಿಕ ಕಾಯ್ದುಕೊಂಡು ಪೂಜೆ ಕೈಂಕರ್ಯದಲ್ಲಿ ಭಾಗವಹಿಸಿ, ದೇವರ ದರ್ಶನ ಪಡೆದುಕೊಂಡರು.

Also Read  ಪತಿಯ ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ನವ ವಿವಾಹಿತೆ ಹತ್ಯೆ!

 

error: Content is protected !!
Scroll to Top