ಸಂಪ್ರೀತ್ ಕೈಯಲ್ಲಿ ಅರಳಿದ ಕುಂಚ ➤ ಮನೆಯಲ್ಲಿ ಎದ್ದು ನಿಂತ ಬಾಲ ಗಣೇಶ

(ನ್ಯೂಸ್ ಕಡಬ) newskadaba.com ಕಡಬ. ಆ,22: ಇಂದು ದೇಶಾದದ್ಯಾಂತ ಗೌರಿ ಗಣೇಶ ಹಬ್ಬದ ಸಂಭ್ರಮ ಸಡಗರ ಮನೆ ಮಾಡಿದೆ. ಈ ಬಾರಿಯ ಎಲ್ಲ ಹಬ್ಬ ಹರಿದಿನಗಳನ್ನ ಕೊರೋನಾ ಕಸಿದಿದೆ.ಆದರೂ ಸರಳವಾಗಿ ಗಣೇಶನ ಹಬ್ಬವನ್ನು ಎಲ್ಲೆಡೆ ಆಚರಿಸಲಾಗುತ್ತಿದೆ.

 

 

ಬಿಳಿನಲೆಯ ಮುಂಗ್ಲಿಮಜಲು ಎಂಬಲ್ಲಿ ಬಾಲಕನೋರ್ವ ಕಳೆದೊಂದು ವಾರದಿಂದ ತನ್ನದೆ ಶೈಲಿಯಲ್ಲಿ ಪುಟ್ಟ ಗಣೇಶನನ್ನ ಮನೆಗೆ ಬರಮಾಡಿಕೊಂಡಿದ್ದಾನೆ.

 

 

ಹೌದು, ಈತನ ಹೆಸರು ಸಂಪ್ರೀತ್ ಬಿ ಎಲ್. 8 ತರಗತಿಯಲ್ಲಿ ಓದುತ್ತಿರುವ ಈತ, ಲಕ್ಷ್ಮಣ ಆಚಾರ್ಯ ಹಾಗೂ ಶಾರದ ದಂಪತಿಯ ಪುತ್ರ. ಈ ಹಬ್ಬಗಳ ಸಮಯದಲ್ಲಿ ಮಣ್ಣಿನ ಹಾಗೂ ಅರಶಿನದಿಂದ ಗಣಪತಿಯ ಮೂರ್ತಿಯನ್ನ ಸಿದ್ದಗೊಳಿಸಿದ್ದಾನೆ.

Also Read  ಆಸ್ತಿ ಇಲ್ಲದವರಿಗೆ 24 ಗಂಟೆಯಲ್ಲಿ ಬಿಪಿಎಲ್ ಕಾರ್ಡ್   ➤  ಪಡಿತರ ಅಂಗಡಿಯಲ್ಲಿ SC, ST ಗೆ ಶೇಕಡ 24.1 ರಷ್ಟು ಮೀಸಲಾತಿ ನೀಡಲು ಶಿಫಾರಸು..!

 

ಬಳಿಕ ಬಣ್ಣದಿಂದ ಅಲಂಕಾರವನ್ನು ಮಾಡಿದ್ದಾನೆ. ಈತನ ಕೈಚಲಕದಲ್ಲಿ ಮೂಡಿಬಂದ ವಿಘ್ನ ವಿನಾಶಕ, ಗಣೇಶ ಚತುರ್ಥಿಯ ದಿನವಾದ ಇಂದು ಗಣಪನ ಮೂರ್ತಿಯನ್ನು ತಮ್ಮ ಮನೆಯಲ್ಲೇ ಪ್ರತಿಷ್ಟಾಪಿಸಿ, ಸರಳವಾಗಿ ಪೂಜೆಯನ್ನು ನೆರವೇರಿಸಿ ಸಂಭ್ರಮಿಸಿದ್ದಾರೆ. ಇವರಿಗೆ ಸ್ವರ್ಣ ಗೌರಿ ಮತ್ತು ಸಿದ್ದಿವಿನಾಯಕ ಸುಖ ಸಂತೋಷ ನೀಡಿ ಹರಸಲಿ.

 

error: Content is protected !!
Scroll to Top