(ನ್ಯೂಸ್‌ಕಡಬ)newskadaba.com.ಪುತ್ತೂರು. ಆ,22: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆ.22ರಂದು ನಡೆಯುವ ಕದಿರು ವಿನಿಯೋಗ ಕಾರ್ಯಕ್ರಮ ದೇವಸ್ಥಾನದ ಸಂಪ್ರದಾಯಕ್ಕೆ ಸೀಮೀತಗೊಂಡು ಸಾಂಕೇತಿಕವಾಗಿ ಹೊಸ ಅಕ್ಕಿ ನೈವೇದ್ಯ ಕಾರ್ಯಕ್ರಮ ನಡೆಯಲಿದೆ.
ಪ್ರತಿ ವರ್ಷ ಸಂಪ್ರದಾಯದಂತೆ ಭಾದ್ರಪದ ಶುಕ್ಲ ಪಕ್ಷದ ಹಸ್ತಾ ನಕ್ಷತ್ರದ ಗೌರಿ ತದಿಗೆಯಂದು ಕದಿರು ವಿನಿಯೋಗ ನಡೆಯುತ್ತಿದ್ದು, ಈ ವರ್ಷ ಅಧಿಕ ಮಾಸದ ಕಾರಣ ಹಸ್ತಾ ನಕ್ಷತ್ರವು ಶ್ರೀ ಗಣೇಶ ಚತುರ್ಥಿಯಂದು ಬಂದ ಹಿನ್ನೆಲೆಯಲ್ಲಿ ಆ.22 ರಂದು ಶ್ರೀ ದೇವರಿಗೆ ಹೊಸ ಅಕ್ಕಿ ನೈವೇದ್ಯ ಸಮರ್ಪಣೆ, ಕದಿರು ವಿನಿಯೋಗ ನಡೆಯಲಿದೆ. ಕೊವೀಡ್ – 19 ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಸರಳವಾಗಿ ಸರಕಾರದ ನಿಯಮಗಳನ್ನು ಪಾಲಿಸಿಕೊಂಡು ನಡೆಸಲಾಗುವುದು ಎಂದು ದೇವಳದ ಪ್ರಕಟಣೆ ತಿಳಿಸಿದೆ. ದೇವಳದ ಆಡಳಿತಾಧಿಕಾರಿ ಸಹಾಯಕ ಕಮೀಷನರ್ ಡಾ|ಯತೀಶ್ ಉಳ್ಳಾಲ್, ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್‌ರವರು ದೇವಳದ ಕಚೇರಿಯಲ್ಲಿ ಕಾರ್ಯಕ್ರಮದ ಪೂರ್ವಭಾವಿಯಾಗಿ ಪರಿಶೀಲನೆ ಮಾಡಿದರು.