(ನ್ಯೂಸ್ ಕಡಬ) newskadaba.com.ಮಂಗಳೂರು, ಆ.21: ಕೋವಿಡ್-19 ಹೆಚ್ಚಾಗುತ್ತಿರುವುದರಿಂದ ವಿಪತ್ತು ನಿರ್ವಹಣೆ ದೃಷ್ಟಿಯಿಂದ ನಗರದ ಸೆಂಟ್ರಲ್ ಮಾರುಕಟ್ಟೆಯನ್ನು ಮತ್ತೆ ಮಂಗಳೂರು ಮಹಾನಗರ ಪಾಲಿಕೆ ಬಂದ್ ಮಾಡಿದೆ.
ಗುರುವಾರ ಸಂಜೆ ವೇಳೆಗೆ ಮಹಾನಗರ ಪಾಲಿಕೆಯ ಅಧಿಕಾರಿಗಳು ಸ್ಥಳಕ್ಕೆ ಬಂದು, ಶುಕ್ರವಾರದಿಂದ ವ್ಯಾಪಾರ ವ್ಯವಹಾರ ಸ್ಥಗಿತಗೊಳಿಸುವಂತೆ ಸೂಚಿಸಿ ವ್ಯಾಪಾರಿಗಳನ್ನು ಕಳುಹಿಸಿದರು. ಸೆಂಟ್ರಲ್ ಮಾರುಕಟ್ಟೆಗೆ ಬಂದ್ ಮಾಡಿರುವ ಆದೇಶವನ್ನು ಪಾಲಿಕೆಯು ಹಿಂಪಡೆದಿದ್ದರಿಂದ ಕಳೆದ ಗುರುವಾರದಿಂದ ವರ್ತಕರು ಸೆಂಟ್ರಲ್ ಮಾರುಕಟ್ಟೆಯಲ್ಲಿ ವ್ಯವಹಾರವನ್ನು ಆರಂಭಿಸಿದ್ದರು, ಆದರೆ ಮಂಗಳವಾರ ಜಿಲ್ಲಾಧಿಕಾರಿ ಹೊಸ ಆದೇಶ ಹೊರಡಿಸಿ ಸಾರ್ವಜನಿಕ ಹಿತದೃಷ್ಟಿಯಿಂದ ಬಂದ್ ಮಾಡುವಂತೆ ಸೂಚಿಸಿದ್ದರು. ವ್ಯಾಪಾರಸ್ಥರು ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೆ ತಮಗೆ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿದ್ದರು.
ಇದರ ಕುರಿತೂ ಪ್ರತಿಕ್ರಹಿಸಿದ ಜಿಲ್ಲಾಧಿಕಾರಿಯವರು ವರ್ತಕರಿಗೆ ಬದಲಿ ವ್ಯವಸ್ಥೆಗೆ ಮೂರು ಜಾಗವನ್ನು ಗುರುತಿಸಿದ್ದೇವೆ ಹಳೆ ಬಸ್ ನಿಲ್ದಾಣ, ಪುರಭವನ ಹಾಗೂ ಲೇಡಿಗೋಷನ್ ಎದುರು ಮತ್ತು ನೆಲ್ಲಿಕಾಯಿ ರಸ್ತೆಯಲ್ಲಿರುವ ಎಪಿಎಂಸಿ Pಟ್ಟಡದಲ್ಲಿ ಮಾಡಬಹುದೆಂದು ಸೂಚಿಸಿದ್ದಾರೆ.