ಪರಸ್ಪರ ಮುಖಾಮುಖಿಯಾಗಿ ಡಿಕ್ಕಿಯಾದ ಬೈಕ್ – ಸ್ಕೂಟಿ ➤ ಪ್ರಾಣಾಪಾಯದಿಂದ ಪಾರಾದ ಸವಾರರು

(ನ್ಯೂಸ್ ಕಡಬ) newskadaba.com ಸುಳ್ಯ. ಆ,21:  ಅರಂತೋಡು ಪೇಟೆ ಬಳಿ ಸ್ಕೂಟಿ ಹಾಗೂ ಬೈಕ್ ನಡುವೆ ಮುಖಾಮುಖಿ ಢಿಕ್ಕಿಯಾಗಿದೆ. ಪರಿಣಾಮ ಸವಾರರಿಗೆ ಗಾಯವಾದ ಘಟನೆ ಕಳೆದ ದಿನ ನಡೆದಿದೆ.

 

 

ಅಡ್ಯಡ್ಕ ಕಾಳಿಮುತ್ತು ಹಾಗೂ ಜಾನ್ಸನ್ ಮೇಸ್ತ್ರಿಯವರ ಬೈಕ್ ಪರಸ್ಪರ ಡಿಕ್ಕಿ ಹೊಡೆದು, ಕಾಳಿಮುತ್ತು ಹಾಗೂ ಬೈಕ್ ನ ಹಿಂಬದಿ ಸವಾರ ಮೋನಪ್ಪ ಎಂಬುವರಿಗೆ ಗಾಯವಾಗಿದೆ. ಸುಳ್ಯದಿಂದ ಕಲ್ಲುಗುಂಡಿಗೆ ಜಾನ್ಸನ್ ತೆರಳುತ್ತಿದ್ದಾಗ ಕಾಳಿಮುತ್ತು ಎಂಬುವರು ಅಡ್ಯಡ್ಕ ಕಡೆಗೆ ಹೋಗುತ್ತಿದ್ದರು.  ಈ ಸಂದರ್ಭದಲ್ಲಿ ಘಟನೆ ನಡೆದಿದೆ.

Also Read  ಚಿನ್ನದ ದರದಲ್ಲಿ ತುಸು ಇಳಿಕೆ

 

 

error: Content is protected !!
Scroll to Top