ಮಹರ್ಷಿ ಆನಂದ್ ಗುರೂಜಿ ಮನೆ ಬಾಗಿಲಿಗೆ ಬಿಯರ್ ಬಾಟಲಿ ಒಡೆದು ಮಾಂಸ ಎಸೆದು ಪರಾರಿ ► ಸಿಸಿಟಿವಿಯಲ್ಲಿ ಸೆರೆಯಾದ ಕೃತ್ಯ.!!

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.16, ಬನಶಂಕರಿ ಮೂರನೇ ಹಂತದ ಕಾಮಾಕ್ಯ ಬಡವಾಣೆಯಲ್ಲಿರುವ ಮಹರ್ಷಿ ಆನಂದ್ ಗುರೂಜಿ ಮನೆ ಮೇಲೆ ದುಷ್ಕರ್ಮಿಗಳು ಬಿಯರ್ ಬಾಟಲಿ ಮತ್ತು ಮಾಂಸದ ತುಂಡನ್ನು ಎಸೆದಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮನೆಯ ಗೋಡೆ ಹಾಗು ಬಾಗಿಲಿಗೆ ಬಿಯರ್ ಬಾಟಲಿ ಒಡೆದು ಮಾಂಸ ಎಸೆದು ಪರಾರಿಯಾದ ದುಷ್ಕರ್ಮಿಗಳ ಈ ಕೃತ್ಯ ಆನಂದ್ ಗುರುಜಿ ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Also Read  ಆಪರೇಷನ್ ಆಡಿಯೋದ ಬಗ್ಗೆ ಚಾಟಿ ಬೀಸಿದ ಸ್ಪೀಕರ್ ➤ಸದನದಲ್ಲಿ ಭಾವುಕರಾದ ರಮೇಶ್ ಕುಮಾರ್

ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

error: Content is protected !!
Scroll to Top