ಸುಳ್ಯ: ಬಿಜೆಪಿ ಮಂಡಲದ ಯುವ ಮೋರ್ಚಾ ನೂತನ ಪದಾಧಿಕಾರಿಗಳ ಆಯ್ಕೆ

(ನ್ಯೂಸ್ ಕಡಬ) newskadaba.com ಸುಳ್ಯ. ಆ,21 : ಭಾರತೀಯ ಜನತ ಪಾರ್ಟಿ ಸುಳ್ಯ ಇದರ ಯುವ ಮೋರ್ಚಾ ಪದಾಧಿಕಾರಿಗಳ ಆಯ್ಕೆಯು ಪಕ್ಷತ ಕಛೇರಿಯಲ್ಲಿ ನಡೆದಿದ್ದು, ಮಂಡಲ ಸಮೀತಿಯ ಅಧ್ಯಕ್ಷರಾದ ಹರೀಶ್‌ ಕಂಜಿಪಿಲಿಯವರ ನೇತೃತ್ವದಲ್ಲಿ ನಡೆಯಿತು.

ಯುವ ಮೋರ್ಚಾದ ನೂತನ ಅಧ್ಯಕ್ಷರಾಗಿ ಕಡಬ ತಾಲೂಕಿನ ಬಲ್ಯ ಗ್ರಾಮದ ಶ್ರೀಕೃಷ್ಣ ಎಂ.ಆರ್.‌, ಪ್ರಧಾನ ಕಾರ್ಯದರ್ಶಿಯಾಗಿ ಸುಳ್ಯ ಕೇರ್ಪಳದ ಸುನಿಲ್, ಕಾರ್ಯದರ್ಶಿಗಳಾಗಿ ಉಬರಡ್ಕ ಮಿತ್ತೂರು ಗ್ರಾಮದ ಅರವಿಂದ ಎಂ., ಕಾಣಿಯೂರು ಗ್ರಾಮದ ಚೇತನ್‌ ನಾವೂರು, ಕೋಶಾಧಿಕಾರಿಯಾಗಿ ಮಂಡೆಕೋಲು ಗ್ರಾಮದ ಉಗ್ರಾಣಿಮನೆ ಚೈತ್ರಪ್ರಸಾದ್‌ ಯು.ಎಂ., ಉಪಾಧ್ಯರುಗಳಾಗಿ ಏನೆಕಲ್ಲು ಗ್ರಾಮದ ಪರಮಲೆ ಮನುದೇವ್‌, ರೆಂಜಿಲಾಡಿ ಗ್ರಾಮದ ಉಮೇಶ್‌ ಗೌಡ ಆಯ್ಕೆಯಾದರು.

ಸದಸ್ಯರುಗಳಾಗಿ, ಸಂಪಾಜೆ ಗ್ರಾಮದ ಮಿಥುನ್‌ ಬಿ.ಇ., ಜಾಲ್ಸೂರು ಗ್ರಾಮದ ಕೋನಡ್ಕ ಪದವು ಬಾಲಕೃಷ್ಣ, ಗುತ್ತಿಗಾರು ಗ್ರಾಮದ ಮೊಟ್ಟೆಮನೆ ಸಚಿನ್‌, ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಹರ್ಷಿತ್‌ , ಕಡಬ ತಾಲೂಕಿನ ಗೋಳಿತೊಟ್ಟು ಗ್ರಾಮದ ಯಶೋಧರ, ಸುಳ್ಯ ಕಾನತ್ತಿಲದ ದೀಕ್ಷಿತ್‌, ಕಡಬ ತಾಲೂಕಿನ ಕುಂತೂರು ಗ್ರಾಮದ ನಿತೀನ್‌ ಕುಮಾರ್‌, ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಅನಿಲ್‌ ಕುಮಾರ್‌, ಮುರುಳ್ಯ ಗ್ರಾಮದ ಕೀರ್ತನ್‌ ಅವರನ್ನು ಆಯ್ಕೆ ಮಾಡಲಾಗಿತ್ತು.

Also Read  ಶಾಸಕ ಮಾಡಾಳ್ ಐದು ದಿನ ಲೋಕಾಯುಕ್ತ ವಶಕ್ಕೆ..! ➤ ಕೋರ್ಟ್ ಆದೇಶ

 

error: Content is protected !!
Scroll to Top