(ನ್ಯೂಸ್ ಕಡಬ) newskadaba.com.ಪಡುಬಿದ್ರಿ, ಆ.21: ಹಲವು ದಿನಗಳಿಂದ ಗ್ರಾಮಸ್ಥರ ನಿದ್ದೆಗೆಡಿಸಿ ಅಲ್ಲಿನ ಪರಿಸರದಲ್ಲಿ ಓಡಾಡುತ್ತಿದ್ದ ಚಿರತೆಯೊಂದು ಅರಣ್ಯಾಧಿಕಾರಿಗಳು ಇರಿಸಿದ್ದ ಬೋನಿಗೆ ಬಿದ್ದ ಘಟನೆ ಕಾಪು ತಾಲೂಕಿನ ಪಡುಬಿದ್ರಿ ಸಮೀಪದ ಸಾಂತೂರಿನಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಈ ಚಿರತೆಯು ಸಾಂತೂರಿನ ರವಿ ಶೆಟ್ಟಿಯವರ ಮನೆಯ ಸುತ್ತಮುತ್ತ ಚಿರತೆಯು ಓಡಾಟ ನಡೆಸುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸರಿಯಾಗಿತ್ತು. ಈ ಹಿನ್ನಲೆಯಲ್ಲಿ ಅರಣ್ಯ ಅಧಿಕಾರಿಗಳು ಚಿರತೆಯನ್ನು ಹಿಡಿಯಲು ಇಲ್ಲಿ ಬೋನು ಇಟ್ಟಿದ್ದರು. ಗುರುವಾರ ತಡರಾತ್ರಿ ಹೆಣ್ಣು ಚಿರತೆಯು ಬೋನಿಗೆ ಬಿದ್ದಿದ್ದು ಇಂದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ
ವಲಯ ಅರಣ್ಯಾಧಿಕಾರಿ ಕ್ಲಿಪರ್ಟ್ ಲೋಬೋ, ಅರಣ್ಯ ಅಧಿಕಾರಿಗಳಾದ ಜೀವನದಾಸ್ ಶೆಟ್ಟಿ, ಗುರುರಾಜ್, ಅಭಿಲಾಶ್, ಜಯರಾಮ ಶೆಟ್ಟಿ, ಮಂಜುನಾಥ್ ನಾಯಕ್, ಪರಶುರಾಮ, ಸ್ಥಳಕ್ಕೆ ಆಗಮಿಸಿದ್ದಾರೆ.