ಪಂಪ್‍ವೆಲ್ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ➤ ಪುತ್ತೂರು ಮೂಲದ ಇಬ್ಬರು ಅರೆಷ್ಟ್

(ನ್ಯೂಸ್ ಕಡಬ) newskadaba.com ಕಡಬ. ಆ,21:  ಲಾಡ್ಜ್ವೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಪೊಲೀಸರು ಗುರುವಾರದಂದು ನಗರದ ಪಂಪ್ವೆಲ್ ಲಾಡ್ಜ್ ಗೆ ದಾಳಿ ನಡೆಸಿದ್ದಾರೆ. ವೇಶ್ಯಾವಾಟಿಕೆ ದಂಧೆ ಯಲ್ಲಿ ತೊಡಗಿದ್ದ ಆರೋಪದ ಮೇಲೆ ಲಾಡ್ಜ್ ಸಿಬ್ಬಂದಿ ಹಾಗೂ ಬ್ರೋಕರನ್ನ ಪೊಲೀಸರು ಬಂಧಿಸಿ ಮೂವರು ಯುವತಿಯರನ್ನು ರಕ್ಷಿಸಿದ್ದಾರೆ.

 

ಕಬಕ ಸಮೀಪದ ಕಡಂದಲೆ ನಿವಾಸಿ ಹರೀಶ್ ಶೆಟ್ಟಿ (45), ಪುತ್ತೂರು ತಾಲೂಕು ಬೊಳುವಾರು ನಿವಾಸಿ ಸಾಗರ್ (40) ಬಂಧಿತ ಆರೋಪಿಗಳು. ಲಾಡ್ಜ್ ನಲ್ಲಿ ಸೆಕ್ಸ್ ರಾಕೆಟ್ ಸಕ್ರಿಯವಾಗಿದೆ ಎಂಬ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದಾರೆ. ಹರೀಶ್ ಶೆಟ್ಟಿ ಎಂಬಾತ ಲಾಡ್ಜ್ ನ ಉದ್ಯೋಗಿಯಾಗಿದ್ದಾನೆ. ಸಾಗರ್ ಪಿಂಪ್ ಆಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕದ್ರಿ ಠಾಣೆ ನಗರ ಅಪರಾಧ ವಿಭಾದ ಸಿಬ್ಬಂದಿ ಹಾಗೂ ನಗರದ ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದರು. ಅಲ್ಲದೆ, ದಂದೆಯ ಸ್ಥಳದಲ್ಲಿದ್ದ ಮೂರು ಯುವತಿಯರನ್ನು ರಕ್ಷಿಸಿದ್ದಾರೆ. ಈ ಕುರಿತು ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ನೆಲ್ಯಾಡಿ :  ಅನುಮತಿ ಇಲ್ಲದೆ ಮಾಹಿತಿ ಸಂಗ್ರಹ ➤ ಮೂವರು ಪೊಲೀಸರ ಬಲೆಗೆ..!!!                              

 

 

error: Content is protected !!
Scroll to Top