ಕುಂದಾಪುರ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರ ಬಂಧನ ಓರ್ವ ಎಸ್ಕೇಪ್

(ನ್ಯೂಸ್ ಕಡಬ) newskadaba.com.ಕುಂದಾಪುರ, ಆ.21:ಜಪ್ತಿ ಗ್ರಾಮದ ಇಂಬಾಳಿಯ ಕೃಷ್ಣಯ್ಯ ಶೆಟ್ಟಿ ಎಂಬುವವರಿಗೆ ಸೇರಿದ ಶೆಡ್ಡಿನಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ 2 ಯುವಕರನ್ನು ಮತ್ತು ಅವರ ಬಳಿ ಇದ್ದ ಗಾಂಜಾವನ್ನು ಕಳೆದ ದಿನ ಕುಂದಾಪುರ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಕಂಡ್ಲೂರು ಜೆಎಂ ರಸ್ತೆಯ ಕರಾಣಿ ನಿವಾಸಿ ಮಹಮ್ಮದ್ ನದೀಮ್ (25) ಹಾಗೂ ಕಂಡ್ಲೂರು ಜೆಎಂ ರಸ್ತೆಯ ಕಾವ್ರಾಡಿ ನಿವಾಸಿ ಬೆಟ್ಟಿ ಮಹಮ್ಮದ್ ಅಫ್ಜಲ್ (28) ಎಂದು ತಿಳಿದು ಬಂದಿದೆ.

ಆಗಸ್ಟ್ 20ರಂದು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷರಾದ ರಾಜ್ ಕುಮಾರ್ ಪಿ ಎಸ್ ಐ ಅವರಿಗೆ ಜಪ್ತಿ ಗ್ರಾಮದ ಇಂಬಾಳಿಯ ಕೃಷ್ಣಯ್ಯ ಶೆಟ್ಟಿ ಎಂಬುವವರಿಗೆ ಸೇರಿದ ಶೆಡ್ಡಿನಲ್ಲಿ ಗಾಂಜಾ ಮಾರಾಟದ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಕುಂದಾಪುರ ತಾಲೂಕು ದಂಡಾಧಿಕಾರಿ ಹಾಗೂ ಸಿಬ್ಬಂದಿಯೊಂದಿಗೆ ಧಾಳಿ ನಡೆಸಿದ ವೇಳೆ ಆರೋಪಿಗಳಾದ ಕರಾಣಿ ಮಹಮ್ಮದ್ ನದೀಮ್ ಹಾಗೂ ಬೆಟ್ಟಿ ಮಹಮ್ಮದ್ ಅಫಲ್‍ನ್ನು ಬಂಧಿಸಿಲು ಯಶಸ್ವಿಯಾಗಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಇನ್ನೊಬ್ಬ ಆರೋಪಿ ರಯಾನ್ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಬಂಧಿತ ಆರೋಪಿಗಳ ಬಳಿ ಇದ್ದ ಸುಮಾರು 8000 ರೂ ಮೌಲ್ಯದ 60 ಗ್ರಾಂತೂಕದ ಗಾಂಜಾ, 2 ಬೈಕ್ ಹಾಗೂ ಎರಡು ಮೊಬೈಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆಯ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಅಬ್ಬಕ್ಕ ಉತ್ಸವ 2020 - ಕವಿಗೋಷ್ಠಿಗೆ ಅರ್ಜಿ ಅಹ್ವಾನ

error: Content is protected !!
Scroll to Top