ಪುತ್ತೂರು: ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ

(ನ್ಯೂಸ್‌ ಕಡಬ) newskadaba.com ಪುತ್ತೂರು, ಆ. 20. ಮಹಿಳೆಯೋರ್ವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಡ್ನೂರು ಗ್ರಾಮದ ಅಮ್ಚಿನಡ್ಕ ಎಂಬಲ್ಲಿ ನಡೆದಿದೆ.

ಮೃತರನ್ನು ಅಮ್ಚಿನಡ್ಕ ದಿ.ಮುತ್ತಪ್ಪ ಗೌಡ ಅವರ ಪತ್ನಿ ಸಾವಿತ್ರಿ(೭೪ವ) ಎಂದು ಗುರುತಿಸಲಾಗಿದೆ. ಅವರು ಅವರು ಹುಲ್ಲು ತರಲೆಂದು ತೋಟಕ್ಕೆ ಹೋದವರು ತೋಟದಲ್ಲಿರುವ ಕೆರೆಗೆ ಬಿದ್ದ ವಿಚಾರ ತಿಳಿದು ಸಂಬಂಧಿಕರು ಸ್ಥಳೀಯರು ಸೇರಿ ಇವರನ್ನು ಕೆರೆಯಿಂದ ಮೇಲಕ್ಕೆತ್ತಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ದಿದ್ರರು. ಅಲ್ಲಿ ವೈದ್ಯರ ಪರೀಕ್ಷೆ ನಂತರ ಆಕೆ ಮೃತಪಟ್ಟಿರುವ ಕುರಿತು ತಿಳಿಸಿದ್ದರು. ಸಾವಿತ್ರಿಯವರು ಕೆರೆಗೆ ಹಾರಿ ಮೃತಪಟ್ಟಿರುವುದಾಗಿ ಮೃತರ ಪುತ್ರಿ ಸೀತಮ್ಮ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಮೃತರು ಪುತ್ರಿ ಹಾಗೂ ಪುತ್ರರನ್ನು ಅಗಲಿದ್ದಾರೆ.

Also Read  ಕಡಬ: ಚಿರತೆ ಮರಿಯನ್ನು ಹೋಲುವ ಪ್ರಾಣಿ ವಾಹನದಡಿಗೆ ಬಿದ್ದು ಸಾವು

error: Content is protected !!
Scroll to Top