ರಾಜ್ಯ ಸರಕಾರದ ಭ್ರಷ್ಟಾಚಾರದ ವಿರುದ್ಧ ಕಡಬ ಕಾಂಗ್ರೇಸ್‍ ವತಿಯಿಂದ ತನಿಖೆಗೆ ಆಗ್ರಹ

(ನ್ಯೂಸ್‌ ಕಡಬ) newskadaba.com ಆ. 20. ರಾಜ್ಯ ಸರಕಾರ ಜಾರಿಗೆ ತಂದಿರುವ ʼರೈತ ವಿರೋಧಿ ಭೂಸುಧಾರಣಾ ಕಾಯ್ದೆʼಯ ತಿದ್ದುಪಡಿ , ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಯ ತಿದ್ದುಪಡಿಗಳನ್ನು ತಕ್ಷಣ ಹಿಂಪಡೆಯಬೇಕು ಹಾಗೂ ಕೊರೋನಾ ನಿಯಂತ್ರಣದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ತನಿಖೆಯನ್ನು ಉಚ್ಚನ್ಯಾಯಾಲಯದ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಅಗ್ರಹಿಸಿ ಗುರುವಾರ ಕಡಬ ಬ್ಲಾಕ್ ಕಾಂಗ್ರೇಸ್ ವತಿಯಿಂದ ರಾಜ್ಯ ಪಾಲರಿಗೆ ಮನವಿ ಸಲ್ಲಿಸಲಾಯಿತು.

ಕಡಬ ತಹಶೀಲ್ದಾರ್ ಕಛೇರಿ ಎದುರು ಸೇರಿದ ಕಾಂಗ್ರೇಸ್ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಕಡಬ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗಣೇಶ್ ಕೈಕುರೆ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಹಲವು ಜನವಿರೋಧಿ ನೀತಿಗಳನ್ನು ಜಾರಿಗೆ ತಂದು ರಾಜ್ಯದ ಜನರಿಗೆ ಅನ್ಯಾಯ ಮಾಡುತ್ತಲೇ ಬಂದಿದೆ, ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಇದನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಮಹಾಮಾರಿ ಕೊರೋನಾ ನಿಭಾಯಿಸುವಲ್ಲಿ ರಾಜ್ಯ ಸರಕಾರ ಎಲ್ಲಾ ವಿಷಯದಲ್ಲೂ ವಿಫಲವಾಗಿದೆ. ಕಿಟ್, ಸ್ಯಾನಿಸೈಟರ್, ಮಾಸ್ಕ್, ಥರ್ಮಲ್ ಸ್ಕ್ಯಾನರ್, ಆಕ್ಷಿಜನ್ ಉಪಕರಣ, ಆಕ್ಸಿಜನ್ ಸಿಲಿಂಡರ್ ಮುಂತಾದ ಉಪಕರಣಗಳನ್ನು ಖರೀದಿಸುವಲ್ಲಿ ವ್ಯಾಪಾಕ ಭ್ರಷ್ಟಾಚಾರ ನಡೆದಿದೆ. ಲಾಕ್ ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸುವಲ್ಲಿ ಕೂಡಾ ಭ್ರಷ್ಟಾಚಾರ ನಡೆದಿದ್ದು, ಇದರ ಸಮಗ್ರ ತನಿಖೆ ನಡೆಸಬೇಕು ಎಂದು ಗಣೇಶ್ ಒತ್ತಾಯಿಸಿ, ಕಡಬ ತಹಶಿಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್ ಅವರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ, ಕಾಂಗ್ರೇಸ್ ಮುಖಂಡರಾದ ಬಾಲಕೃಷ್ಣ ಗೌಡ ಬಳ್ಳೇರಿ, ಫಝಲ್ ಕೋಡಿಂಬಾಳ, ಶಶಿಧರ ಬೊಟ್ಟಡ್ಕ, ಸೈಮನ್ ಸಿ.ಜೆ, ಯತೀಶ್ ಬಾನಡ್ಕ, ಕೆ.ಎ.ಸುಲೈಮಾನ್, ಹನೀಫ್ ಕೆ.ಎಂ, ಫೈಝಲ್ , ಅಶ್ರಫ್ ಶೇಡಿಗುಂಡಿ, ಶರೀಫ್ ಎ.ಎಸ್, ಶೀನಪ್ಪ ಗೌಡ ಬೈತಡ್ಕ, ಸತೀಶ್ ನಾೈಕ್ ಮೇಲಿನ ಮನೆ, ಮನಮೋಹನ ಗೊಳ್ಯಾಡಿ, ಎಂ.ಪಿ.ಯೂಸುಫ್, ತೋಮಸ್ ಇಡಯಾಳ, ಸುಧೀರ್ ಕುಮಾರ್ ದೇವಾಡಿಗ, ಅಭಿಲಾಷ್ ಬಿ.ಕೆ ಮತ್ತಿತರರು ಭಾಗವಹಿಸಿದ್ದರು.

Also Read  ಮನೆಯಲ್ಲಿ ನೆಮ್ಮದಿ ಇಲ್ಲ ಸಂಕಷ್ಟಗಳು ಜಾಸ್ತಿಯಾಗಿದ್ದರೆ ನಿಮ್ಮ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ

error: Content is protected !!
Scroll to Top