ಕಂಕನಾಡಿ ಬಾರ್ & ರೆಸ್ಟೋರೆಂಟ್ ನ ಶೆಡ್ಡಿನಲ್ಲಿ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು. ಆ,20: ನಗರದ ಕಂಕನಾಡಿ ಹಾಲಿವುಡ್ ಬಾರ್&ರೆಸ್ಟೋರೆಂಟ್ ನ ಶೆಡ್ಡಿನ ಬಳಿ ಆಗಸ್ಟ್ 18 ರಂದು 53 ವರ್ಷ ಪ್ರಾಯದ ಮಹೇಶ್ ಎಂಬವರ ಮೃತ ಶರೀರ ಪತ್ತೆಯಾಗಿದೆ. ರೆಸ್ಟೋರೆಂಟ್‍ನ ಶೆಡ್ಡಿನ ಪಕ್ಕಾಸಿಗೆ ಹಳೆಯ ಇಲೆಕ್ಟ್ರಿಕಲ್ ವಯರನ್ನು ಕಟ್ಟಿ ವಯರ್‍ನ ಇನ್ನೊಂದು ತುದಿಯನ್ನು ಕುತ್ತಿಗೆಗೆ ಉರುಳಾಗಿ ಉಪಯೋಗಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ದೇಹದ ಭಾರದಿಂದ ವಯರ್ ತುಂಡಾಗಿ ಕೆಳಕ್ಕೆ ಬಿದ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಮೃತಪಟ್ಟ ಗಂಡಸಿನ ಚಹರೆ ಇಂತಿವೆ: ಹೆಸರು: ಮಹೇಶ, ತಂದೆ: ಹನುಮಂತ, ಪ್ರಾಯ: ಸುಮಾರು 53 ವರ್ಷ. ಎತ್ತರ ಮತ್ತು ಮೈಕಟ್ಟು: 5.5 ಸಾಧಾರಣ ಮೈಕಟ್ಟು, ಗೋಧಿ ಮೈ ಬಣ್ಣ, ಅಗಲ ಮುಖ ಧರಿಸಿದ ಬಟ್ಟೆ: ಕಪ್ಪು ಬಿಳಿ ಚೌಕುಳಿ ಬರ್ಬುಡ ಚಡ್ಡಿ, ಅರ್ಧ ತೋಳಿನ ನೇರಳೆ ಬಣ್ಣದ ಶರ್ಟು. ವಾರಸುದಾರರು ಪತ್ತೆಯಾದಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣಾ ದೂರವಾಣಿ ಸಂಖ್ಯೆ 0824-2220520ಗೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆ ತಿಳಿಸಿದೆ.

Also Read  ಮನೆಗೆ ಆಕಸ್ಮಿಕ ಬೆಂಕಿ ; ಲಕ್ಷಾಂತರ ರೂ. ನಷ್ಟ

 

error: Content is protected !!
Scroll to Top