(ನ್ಯೂಸ್ ಕಡಬ) newskadaba.com ಬೆಂಗಳೂರು. ಆ,20: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಿಇಟಿ ಫಲಿತಾಂಶ ಆಗಸ್ಟ್ 21 ರ ನಾಳೆ ಪ್ರಕಟವಾಗಲಿದೆ. ಸಿಇಟಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು cetonline.karnataka.gov.in ವೆಬ್ ಸೈಟ್ ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ.
ಫಲಿತಾಂಶ ಪ್ರಕಟವಾದ ನಂತರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಟ್ ಆಫ್ ಪಟ್ಟಿಯನ್ನು ಬಿಡುಗಡೆ ಮಾಡಲಿದೆ.ಜುಲೈ 30 ಮತ್ತು 31 ರಂದು ಕೊರೋನಾ ನಡುವೆಯೂ ಯಶಸ್ವಿಯಾಗಿ ಸಿಇಟಿ ನಡೆಸಲಾಗಿತ್ತು. ಪರೀಕ್ಷೆ ನಡೆದ 20 ದಿನಗಳೊಳಗೆ ಫಲಿತಾಂಶ ಪ್ರಕಟಿಸಲಾಗುತ್ತಿದೆ ಎಂದು ಹೇಳಲಾಗಿದೆ.