ಗ್ರಂಥಾಲಯ – ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ

(ನ್ಯೂಸ್‌ ಕಡಬ) newskadaba.com  ಮಂಗಳೂರು, ಆಗಸ್ಟ್ 19. ಪುತ್ತೂರು ತಾಲೂಕು ಐತ್ತೂರು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಖಾಲಿ ಇರುವ ಒಂದು ಮೇಲ್ವಿಚಾರಕರ ಸ್ಥಾನವನ್ನು ಮಾಸಿಕ ಗೌರವ ಸಂಭಾವನೆ ರೂ. 7000 ಆಧಾರದ ಮೇಲೆ ಭರ್ತಿ ಮಾಡಲು ಎಸ್.ಎಸ್.ಎಲ್.ಸಿ ಪಾಸಾದ ಹಾಗೂ ಅದೇ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಐತ್ತೂರು ಗ್ರಾಮ ಪಂಚಾಯತ್ ಮೇಲ್ವಿಚಾರಕರ ಸ್ಥಾನವು ಪರಿಶಿಷ್ಟ ಜಾತಿ ಮೀಸಲಾಗಿರುತ್ತದೆ. ಭರ್ತಿ ಮಾಡಿದ ಅರ್ಜಿಯ ಜೊತೆಗೆ ಇತರೆ ದೃಢೀಕೃತ ದಾಖಲೆಗಳನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸಲ್ಲಿಸಲು ಸೆಪ್ಪೆಂಬರ್ 11 ಕೊನೆ ದಿನ.ಹೆಚ್ಚಿನ ಮಾಹಿತಿಗಾಗಿ ಗ್ರಾಮ ಪಂಚಾಯತ್, ಮಂಗಳೂರು ಜಿಲ್ಲಾ ಕೇಂದ್ರ ಗ್ರಂಥಾಲಯ ಅಥವಾ ದೂರವಾಣಿ ಸಂಖ್ಯೆ; 0824-2441905 ಸಂಪರ್ಕಿಸುವಂತೆ ಮಂಗಳೂರು ಜಿಲ್ಲಾ ಕೇಂದ್ರ ಗ್ರಂಥಾಲಯ ಮುಖ್ಯ ಗ್ರಂಥಾಲಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Also Read  ಸರಳವಾಗಿ ದಸರಾ ಆಚರಣೆ ನಡೆಸುತ್ತಿರುವುದನ್ನು ವಿರೋಧಿಸಿ ವಾಟಾಳ್ ಪ್ರತಿಭಟನೆ ➤ ನಾಗರಾಜ್ ಹಾಗು ಕಾರ್ಯಕರ್ತರು ಪೊಲೀಸರ ವಶಕ್ಕೆ

error: Content is protected !!
Scroll to Top