ಬೆಳ್ತಂಗಡಿ: ಕಾರಿನಲ್ಲಿಯೇ ವಿಷ ಸೇವಿಸಿ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) ಬೆಳ್ತಂಗಡಿ, ಆ. ೧೯. ಕಾರು ನಿಲ್ಲಿಸಿ ವ್ಯಕ್ತಿಯೊಬ್ಬ ವಿಷ ಸೇವಿಸಿ ಮೃತಪಟ್ಟಿರುವ ಘಟನೆ ಚಾರ್ಮಾಡಿ ಘಾಟ್ ನಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮಲೆಯಮಾರುತ ಬಳಿ ಈ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ವಿಷ ಸೇವಿಸಿದ ಪರಿಣಾಮ ಕಾರಿನಲ್ಲೇ ಮೃತಪಟ್ಟಿದ್ದಾನೆ. ನಿನ್ನೆ ಸಂಜೆಯಿಂದ ಚಾರ್ಮಾಡಿ ಘಾಟ್ ರಸ್ತೆ ಬದಿ KA-05-MT-4877 ನಂಬರ್ ನ ಕ್ವಿಡ್ ಕಾರೊಂದು ನಿಂತಿದ್ದು, ಅದೇ ಕಾರಿನಲ್ಲಿ ಆತ ವಿಷ ಸೇವಿಸಿದ್ದಾನೆ ಎನ್ನಲಾಗಿದೆ. ಆದರೆ ಮೃತಪಟ್ಟವನ ಗುರುತು ಪತ್ತೆಯಾಗಿಲ್ಲ. ಕಾರಿನ ಪಕ್ಕದ ರಸ್ತೆಯಲ್ಲಿ ವಿಷದ ಬಾಟಲಿ ಪತ್ತೆಯಾಗಿದ್ದು, ಸ್ಥಳಕ್ಕೆ ಬಣಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Also Read  ಕಡಬ: ಮತ್ತೆ ಚಿರತೆ ಪ್ರತ್ಯಕ್ಷ ➤ ಸಾಕುನಾಯಿಯ ಮೇಲೆ ದಾಳಿ

error: Content is protected !!
Scroll to Top