ಕುಂದಾಪುರ: ಅಕ್ರಮ ಕೋಣಗಳ ಸಾಗಾಟ -ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಕುಂದಾಪುರ, ಆ. 19. ಹೊಸಂಗಡಿ ಚೆಕ್ ಪೋಸ್ಟ್ ಅಮಾಸೆಬೈಲು ಠಾಣೆಯ ಪೋಲೀಸ್ ಉಪನಿರೀಕ್ಷಕ ಅನಿಲ್‍ ಕುಮಾರ್ ಅವರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಹುಲಿಕಲ್ ಘಾಟಿಯಿಂದ ಹೊಸಂಗಡಿ ಕಡೆಗೆ ಬರುತ್ತಿದ್ದ ಟ್ರಕ್ ವಾಹನದಲ್ಲಿ ಅಕ್ರಮ ಗೋ ಸಾಗಾಟವನ್ನು ಪತ್ತೆ ಹಚ್ಚಿದ್ದಾರೆ.

ಉತ್ತರ ಪ್ರದೇಶ ನೋಂದಾಯಿತ ಟ್ರಕ್‍ನಲ್ಲಿ ಸುಮಾರು 37 ಕೋಣಗಳನ್ನು ಹಿಂಸ್ಮಾತಕವಾಗಿ ಕಟ್ಟಿಹಾಕಿ, ವಧೆ ಮಾಡುವ ಉದ್ದೇಶಕ್ಕಾಗಿ ಸಾಗಣಿಕೆ ಮಾಡುತ್ತಿದ್ದ ವೇಳೆ ಪೊಲೀಸರು ವಾಹನ ಮತ್ತು ಕೋಣಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಾದ ಉತ್ತರ ಪ್ರದೇಶದ ಸಾಹಿರ್ ಜಿಲ್ಲೆಯ ಕಮಲಾಪುರದ ಶಕೀಲ್(35) ಮತ್ತು ಮೀರತ್ ಜಿಲ್ಲೆಯ ಪಕ್ರಿ ಆಲಂ (24)ನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ರಾಜ್ಯದಲ್ಲಿಂದು 299 ಮಂದಿಗೆ ಕೋವಿಡ್: ಸಾವಿನ ಸಂಖ್ಯೆ 51ಕ್ಕೆ ಏರಿಕೆ

 

error: Content is protected !!
Scroll to Top