ಮರದ ರೆಂಬೆ ಮುರಿದು ಬಿದ್ದು ವ್ಯಕ್ತಿ ಮೃತ್ಯು ► ಬಸ್ ಕ್ಲೀನರ್ ಪಾಲಿಗೆ ಮರದ ರೆಂಬೆಯೇ ಯಮರಾಜ..!!

(ನ್ಯೂಸ್ ಕಡಬ) newskadaba.com ಮೈಸೂರು,ಸೆ.15, ಖಾಸಗಿ ಬಸ್ಸನ್ನು ಕ್ಲೀನ್ ಮಾಡುತ್ತಿದ್ದ ವೇಳೆ ತಲೆಯ ಮೇಲೆ ಮರದ ರೆಂಬೆಯೊಂದು ಮುರಿದು ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಮೈಸೂರಿನ ಉಡ್ ಲ್ಯಾಂಡ್ ಚಿತ್ರಮಂದಿರದ ಎದುರು ಶುಕ್ರವಾರ ನಡೆದಿದೆ.

ಮೃತ ವ್ಯಕ್ತಿಯು ಮೈಸೂರು ತಾಲೂಕಿನ ರಮ್ಮನಹಳ್ಳಿ ಗ್ರಾಮದ ನಿವಾಸಿಯಾಗಿದ್ದು 45 ವರ್ಷದ ಮಂಚಯ್ಯ ಎಂದು ಗುರುತಿಸಲಾಗಿದೆ. ಎಸ್.ಎಸ್.ಟಿ ಖಾಸಗಿ ಬಸ್ಸಿನಲ್ಲಿ ಕ್ಲೀನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಂಚಯ್ಯ ಎಂದಿನಂತೆ ಇಂದು ಬೆಳಗ್ಗೆ ವಾಹನವನ್ನು ಸ್ವಚ್ಛಗೊಳಿಸುತ್ತಾ ನಿಂತಿದ್ದರು. ಅದೇ ವೇಳೆ ಅಲ್ಲಿಯೇ ಇದ್ದ ಹಳೆಯ ಮರದ ರೆಂಬೆಯೊಂದು ಇದ್ದಕ್ಕಿದ್ದಂತೆ ಮುರಿದು ಮಂಚಯ್ಯ ತಲೆಯ ಮೇಲೆ ಬಿದ್ದಿದೆ. ಕೂಡಲೇ ಅವರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲೇ ಮಂಚಯ್ಯ ಪ್ರಾಣಪಕ್ಷಿ ಹಾರಿಹೋಗಿತ್ತು.

Also Read  ಗೊಬ್ಬರ ಸಾಗಿಸುತ್ತಿದ್ದ ಲಾರಿ ಪಲ್ಟಿ ➤ ಚಾಲಕ ಪ್ರಾಣಾಪಾಯದಿಂದ ಪಾರು

 

error: Content is protected !!
Scroll to Top