(ನ್ಯೂಸ್ ಕಡಬ) newskadaba.com ಕಡಬ,ಸೆ.15, ನವೆಂಬರ್ ತಿಂಗಳ ಅಂತ್ಯಕ್ಕೆ ರಾಜ್ಯದ ಸುಮಾರು 6092 ಗ್ರಾಮ ಪಂಚಾಯ್ತಿಗಳಿಗೆ ಇಂಟರ್‍ನೆಟ್ ಸೌಲಭ್ಯ ಕಲ್ಪಿಸಲು ಈಗಾಗಲೇ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಲಾಗಿದ್ದು, ಈಗಾಗಲೆ 643 ಗ್ರಾಪಂಗಳಿಗೆ ವೈಫೈ ಸೌಲಭ್ಯ ನೀಡಲಾಗಿದೆ. ಉಳಿದಿರುವ ಗ್ರಾಮ ಪಂಚಾಯ್ತಿಗಳಿಗೆ ನವೆಂಬರ್ ಅಂತ್ಯದೊಳಗೆ ಇಂಟರ್‍ನೆಟ್ ಸೇವೆ ನೀಡಲಾಗುವುದು ಎಂದು ಕೇಂದ್ರ ದೂರ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಅರುಣ ಸುಂದರರಾಜನ್ ಹೇಳಿದ್ದಾರೆ.
ಒಂದು ವೇಳೆ ಎಲ್ಲ ಗ್ರಾಮ ಪಂಚಾಯ್ತಿಗಳಿಗೂ ಇಂಟರ್‍ನೆಟ್ ಸೌಲಭ್ಯ ಲಭ್ಯವಾದರೆ ದೇಶದಲ್ಲೇ ಈ ಸೌಲಭ್ಯ ಪಡೆದ ಮೊಟ್ಟ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಲಿದೆ. ಒಂದು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕನಿಷ್ಟ ಪಕ್ಷ 100 ಮಂದಿಗಾದರೂ ಇಂಟರ್‍ನೆಟ್ ಸೌಲಭ್ಯ ಸಿಗುವಂತೆ ವ್ಯವಸ್ಥೆ ಕಲ್ಪಿಸಲಾಗುವುದು. ಕುಗ್ರಾಮಗಳ ಕಡೆ 700ರಿಂದ 800 ಎಂಬಿ ನೆಟ್ ಸೌಲಭ್ಯ ನೀಡಲಾಗುವುದು. ಹೋಬಳಿ ಹಾಗೂ ತಾಲ್ಲೂಕು ಮಟ್ಟದಲ್ಲಿ 3ಜಿ ಮತ್ತು 4ಜಿ ಸೌಲಭ್ಯ ಒದಗಿಸುವುದಾಗಿ ತಿಳಿಸಿದ್ದಾರೆ.
ಕೇಂದ್ರ ದೂರ ಸಂಪರ್ಕ ಇಲಾಖೆ ಸಹಭಾಗಿತ್ವದಲ್ಲಿ ಇದು ಅನುಷ್ಠಾನವಾಗಲಿದ್ದು , ತ್ವರಿತ ಹಾಗೂ ಇತ್ತೀಚಿನ ತಂತ್ರಜ್ಞಾನವನ್ನೇ ಬಳಕೆ ಮಾಡಿಕೊಳ್ಳುವ ವಿಶಿಷ್ಟ ಸಾಧನೆಗೆ ರಾಜ್ಯ ಸರ್ಕಾರ ಕೈಹಾಕಿದೆ. ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಸೇರಿದಂತೆ ಹಂತ ಹಂತವಾಗಿ ಎಲ್ಲ ಕಡೆ ಇದರ ಸೌಲಭ್ಯ ವಿಸ್ತರಣೆಯಾಗಲಿದೆ ಎಂದು ಇಲಾಖೆಯ ಕಾರ್ಯದರ್ಶಿ ಅರುಣ ಸುಂದರರಾಜನ್ ತಿಳಿಸಿದ್ದಾರೆ.
ಇಂಟರ್‍ನೆಟ್ ಸೌಲಭ್ಯ