ಕಡಬ ಸಿಎ ಬ್ಯಾಂಕ್ ನಿವ್ವಳ 1.89ಕೋಟಿ ಲಾಭ ► ಗ್ರಾಹಕರ ಅನುಕೂಲಕ್ಕೆ ಸೇಫ್ ಲಾಕರ್ ಸೌಲಭ್ಯ ಶೀಘ್ರದಲ್ಲಿ ಆರಂಭ

(ನ್ಯೂಸ್ ಕಡಬ) newskadaba.com ಕಡಬ,ಸೆ.15, ಕಡಬ ಪ್ರಾ.ಕೃ.ಪ.ಸ.ಸಂಘವು ಪ್ರಸಕ್ತ ಸಾಲಿನ 371.11 ಕೋಟಿ ರೂ.ವ್ಯವಹಾರ ನಡೆಸಿ ಒಟ್ಟು ರೂ.1.89 ಕೋಟಿ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಸುಂದರ ಗೌಡ ಮಂಡೆಕರ ಹೇಳಿದರು.

ಸಂಘದ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಈ ವಿಚಾರ ತಿಳಿಸಿದ ಅವರು ಸಂಘವು ಸರದಿ ಸಾಲಿನಲ್ಲಿ 5987 ಸದಸ್ಯರೊಂದಿಗೆ ಒಟ್ಟು ವ್ಯವಹಾರದಲ್ಲಿ ಎ ಗ್ರೇಡ್ ಹೊಂದಿದೆ. ಸಂಘದಲ್ಲಿ ಒಟ್ಟು 6.65ಕೋಟಿ ಪಾಲು ಬಂಡವಾಳವಿದೆ. ವರ್ಷಾಂತ್ಯಕ್ಕೆ ರೂ. 17.46ಕೋಟಿ ಠೇವಣಿ ಸಂಗ್ರಹವಾಗಿದೆ. ರೂ.67.75 ಕೋಟಿ ಸದಸ್ಯರ ಹೊರಬಾಕಿ ಸಾಲ ಇದೆ. ಈ ಪೈಕಿ 2344 ಮಂದಿ ಸದಸ್ಯರಿಗೆ ಅಲ್ಪಾವದಿ ಬೆಲೆಸಾಲ ನೀಡಲಾಗಿದೆ. ಸಂಘವು 74.96ಕೋಟಿ ದುಡಿಯುವ ಬಂಡವಾಳ ಹೊಂದಿದ್ದು ಈ ಬಾರಿ ದಾಖಲೆಯ ಲಾಭ ಗಳಿಕೆಯಲ್ಲಿದೆ. ಸಂಘದ ಸುಸ್ಥಿರ ವ್ಯವಹಾರಕ್ಕಾಗಿ ಸುಸಜ್ಜಿತವಾದ ಕಟ್ಟಡವನ್ನು ಸುಮಾರು 1.60 ಕೋಟಿ ರೂ.ನ ಕಾಮಗಾರಿ ಈಗಾಗಲೆ ಪೂರ್ಣಗೊಂಡಿದ್ದು ಸದ್ಯದಲ್ಲೆ ಉದ್ಘಾಟನೆ ಮಾಡುವುದಾಗಿ ನಿರ್ಧರಿಸಲಾಗಿದೆ ಎಂದರು. ಇದೇ ಕಟ್ಟಡದ ಮುಂದುವರೆದ ಭಾಗವಾಗಿ 250ಕೋಟಿ ರೂ.ವೆಚ್ಚದಲ್ಲಿ ಕಟ್ಟಡವನ್ನು ನಿರ್ಮಿಸಲು ಅಂದಾಜುಪಟ್ಟಿ ತಯಾರಿಸಲಾಗಿದೆ. ಈಗಾಗಲೇ ಪೂರ್ಣಗೊಂಡಿರುವ ಕಟ್ಟಡದಲ್ಲಿ ಗ್ರಾಹಕರ ಅನುಕೂಲಕ್ಕೆ ಸೇಫ್ಲಾಕರ್, ಗ್ರಾಹಕರ ಹಣ ವರ್ಗಾವಣೆಗಾಗಿ ಆರ್ಟಿಜಿಎಸ್, ಎನ್ಇಎಫ್ಟಿ ಸೌಲಭ್ಯವನ್ನು ಮಾಡಲಾಗಿದೆ. ಇದರೊಂದಿಗೆ ನೀರಾವರಿ ಸಲಕರಣೆಗಳ ಮಳಿಗೆಗಳನ್ನು ಪ್ರಾರಂಭಿಸಲಾಗುತ್ತಿದೆ. ಸಂಘದ ನೂಜಿಬಾಳ್ತಿಲ ಶಾಖೆಯಲ್ಲಿ 250 ಮೆಟ್ರಿಕ್ ಟನ್ ಸಾಮಥರ್ಯ್‌ದ ಗೋದಾಮು ಕಟ್ಟಡವನ್ನು ನಿರ್ಮಿಸಲಾಗುತ್ತದೆ. ಇದಕ್ಕೆ ಸುಮಾರು 22 ಲಕ್ಷ ರೂ. ವೆಚ್ಚವಾಗುತ್ತಿದ್ದು ಸಹಕಾರ ಇಲಾಖೆಯ 5 ಲಕ್ಷ ರೂ.ಸಹಾಯಧನವಿದೆ. ಎಂದು ಹೇಳಿದ ಸುಂದರ ಗೌಡ ಮಂಡೆಕರ ಸಂಘದಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ಮಾಜಿ ಕಾರ್ಯದರ್ಶಿ ಸದಾನಂದ ರಾವ್ ಎಂ.ಅವರ ವಿರುದ್ದ ಸಂಘವು ನಡೆಸುತ್ತಿರುವ ಧಾವೆಗಳ ಪೈಕಿ ಸಂಘದ ಪರವಾಗಿ ತೀರ್ಪು ಮುಟ್ಟುಗೋಲು ಆದೇಶ ಬಂದಿರುತ್ತದೆ. ಮಾಜಿ ಕಾರ್ಯದರ್ಶಿ ಸದಾನಂದ ರಾವ್ ಹಾಗೂ ಮಾಜಿ ಅಧ್ಯಕ್ಷ ಕೆ.ಪಿ ಮೋಹನ್ ಅವರ ವಿರುದ್ದ ಸಂಘವು ಜಂಟಿಯಾಗಿ ನಡೆಸುತ್ತಿರುವ ಧಾವೆಗಳ ಪೈಕಿ ಕರ್ನಾಟಕ ಮೇಲ್ಮನವಿ ಪ್ರಾಧಿಕಾರದವರು ನೀಡಿದ ಆದೇಶವು ಸಂಘದ ಪರವಾಗಿ ಇದ್ದು ವಸೂಲಿಗೆ ಆದೇಶ ಬಂದಿರುತ್ತದೆ ಎಂದು ತಿಳಿಸಿದರು.

Also Read  ಕುಂದಾಪುರ: ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿನೋದ್ ಕ್ರಾಸ್ಟೋ ನೇಮಕ

ಕಡಬ ಪ್ರಾ.ಕೃ,ಪ.ಸ.ಸಂಘದ ಮಹಾಸಭೆಯು ಸೆ.24ನೇ ಭಾನುವಾರ ಕಡಬ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದ ಸಂಘದ ಉಪಾಧ್ಯಕ್ಷ ರಮೇಶ್ ಕಲ್ಪುರೆ ಹೇಳಿದರು. ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸುಂದರ ಗೌಡ ವಹಿಸಲಿದ್ದಾರೆ. ಸಭೆಯಲ್ಲಿ ಉಪನಿಭಂದನೆಗಳ ತಿದ್ದುಪಡಿ ಅವಕಾಶವಿದೆ. ಸಂಘದ ವ್ಯವಹಾರದ ಬಗ್ಗೆ ಚರ್ಚಿಸಲು ಇಚ್ಚಿಸುವವರು ಸಭೆಯ 5 ದಿನ ಮುಂಚಿತವಾಗಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿರವರಿಗೆ ಬರಹದ ಮೂಲಕ ತಿಳಿಸಬೇಕು. ಸಭೆಯಲ್ಲಿ ಭಾಗವಹಿಸುವ ಸದಸ್ಯರು ನೋಟಿಸ್ನೊಂದಿಗೆ ಹಾಜರಾಗಿರಬೇಕು. ಉಪನಿಯಮದಂತೆ ಪ್ರತಿಯೊಬ್ಬ ಎ ದರ್ಜೆ ಸದಸ್ಯರ ಪಾಲು ಬಂಡವಾಳ ಕನಿಷ್ಟ ರೂ.500 ಇರಬೇಕು. ಎಲ್ಲಾ ಸದಸ್ಯರು ತಮ್ಮ ಆಧಾರ್ ಕಾರ್ಡ್, ಪಾನ್ಕಾರ್ಡ್ ಹಾಗೂ ಮೊಬೈಲ್ ನಂ.ಸಂಘದಲ್ಲಿ ನೊಂದಾಯಿಸಿಕೊಳ್ಳಬೇಕು. ಸಭೆಯಲ್ಲಿ ಹಾಜರಾಗುವ ಸದಸ್ಯರಿಗೆ ವಿಶೇಷ ಕೊಡುಗೆ ಇದೆ ಎಂದು ಹೇಳಿದರು.

Also Read  ಕೌಕ್ರಡಿಯ ಪೆರಿಯಶಾಂತಿ ಬಳಿ ಮೃತ ದೇಹ ಪತ್ತೆ


ಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕರಾದ ಸೀತಾರಾಮ ಗೌಡ ಪೊಸೊಳಿಕೆ, ನಿತ್ಯಾನಂದ ಬೊಳ್ಳಾಜೆ, ಸುದರ್ಶನ ಕೆ.ಎಸ್, ಪುವಪ್ಪ ಗೌಡ ಎ, ರಘುಚಂದ್ರ ಕೆ, ರಾಜೀವಿ, ಲೀಲಾವತಿ, ಅಂಗಜ, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಚಾಕೋ ಕೆ.ಎಂ ಮೊದಲಾದವರು ಉಪಸ್ಥಿತರಿದ್ದರು.

error: Content is protected !!
Scroll to Top