ಪುತ್ತೂರು : ತಂದೆಯನ್ನೆ ಹತ್ಯೆಗೈದ ಪಾಪಿ ಪುತ್ರ

(ನ್ಯೂಸ್ ಕಡಬ) newskadaba.com ಪುತ್ತೂರು, ಆ,18:  ಹೆತ್ತವರ ಮೇಲೆ ಮಕ್ಕಳು ಹಲ್ಲೆ ನಡೆಸುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಲೇ ಇದೆ. ಇದೀಗಾ ಪುತ್ತೂರಿನಲ್ಲಿ ಅಂತಹುದೇ ಪ್ರಕರಣ ನಡೆದಿದೆ. ತಂದೆ ಹಾಗೂ ಮಗನ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

 

 

ಪುತ್ತೂರು ತಾಲೂಕಿನ ತಿಂಗಳಾಡಿಯಲ್ಲಿ ತಂದೆ ಹಾಗೂ ಮಗನ ನಡುವೆ ಕಲಹ ಉಂಟಾಗಿ ಪರಸ್ಪರ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ತಂದೆ ಆಸ್ಪತ್ರೆಗೆ ಸಾಗಿಸುವ ವೇಳೆ ಅಸುನೀಗಿದ್ದಾರೆ.  ಕೆದಂಬಾಡಿ ಗ್ರಾಮದ ತಿಂಗಳಾಡಿ ಸಮೀಪದ ಬಾಲಯದ ಗಂಗಾಧರ್ ನಾಯ್ಕ ಮೃತಪಟ್ಟವರು. ಮಗ ಶಶಿಧರ್ ನಾಯ್ಕ್ ತಂದೆ ಗೆ ಹಲ್ಲೆಗೈದವರು ಎನ್ನಲಾಗಿದೆ. ಬಾಲಯದಲ್ಲಿ ಆ.17 ರಂದು ರಾತ್ರಿ ಈ ಕೃತ್ಯ ನಡೆದಿದೆ. ಗಂಭೀರವಾಗಿ ಗಾಯಗೊಂಡ ಗಂಗಾಧರ್ ನಾಯ್ಕರವರನ್ನು ಮೊದಲು ಪುತ್ತೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು ಬಳಿಕ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ.

Also Read  ಪಂಜ ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ➤ ಕಾರಿನಲ್ಲಿದ್ದವರು ಭಾರಿ ಅಪಾಯದಿಂದ ಪಾರು

 

 

error: Content is protected !!
Scroll to Top