ರಸ್ತೆ ದಾಟುತ್ತಿದ್ದ ವೇಳೆ ಲಾರಿ ಡಿಕ್ಕಿ ➤ ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ನಾವುಂದ, ,17: ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ  ಸರಕಾರಿ ಪದವಿ ಪೂರ್ವ ಕಾಲೇಜಿನ  ನಾವುಂದದ ಬಳಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.

 

 

ಮೃತ ವಿದ್ಯಾರ್ಥಿಯನ್ನು ಮರವಂತೆಯ ನಿವಾಸಿ ಕಿಶನ್ ಖಾರ್ವಿ(17) ಎಂದು ಗುರುತಿಸಲಾಗಿದೆ. ನಾವುಂದ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಈತ  ದ್ವಿತೀಯ ವರ್ಷದ ದಾಖಲಾತಿಗಾಗಿ ಕಾಲೇಜಿಗೆ ಬಂದು ಹಿಂತಿರುಗುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸುರೇಶ್ ನಾಯಕ್, ಎಸ್ ಐ ಸಂಗೀತ ಭೇಟಿ ನೀಡಿದ್ದಾರೆ. ಗಂಗೊಳ್ಳಿ ಆಪತ್ಭಾಂದವ ಆಂಬುಲೆನ್ಸ್ ಮೂಲಕ ಶವವನ್ನು ಬೈಂದೂರು ಶವಾಗಾರಕ್ಕೆ ಸಾಗಿಸಲಾಗಿದೆ.

Also Read  ಕಾಂಞಂಗಾಡ್- ಕಾಣಿಯೂರು ರೈಲು ಯೋಜನೆ ಅನುಷ್ಠಾನಗೊಳಿಸುವಂತೆ ಸ್ಪೀಕರ್ ಯುಟಿ.ಖಾದರ್ ಗೆ ಮನವಿ

 

 

error: Content is protected !!
Scroll to Top