ಯುಪಿಯಲ್ಲಿ ಮತ್ತೊಂದು ಗ್ಯಾಂಗ್ ರೇಪ್ ➤ ಬಾಲಕಿಗೆ ಸಿಗರೇಟ್ನಿಂದ ಸುಟ್ಟ ಕಿಡಿಗೇಡಿಗಳು

(ನ್ಯೂಸ್ ಕಡಬ) newskadaba.com ಗೋರಖ್‌ಪುರ ,17:  ಉತ್ತರ ಪ್ರದೇಶದಲ್ಲಿ ಮತ್ತೊಂದು ಗ್ಯಾಂಗ್‌ ರೇಪ್‌ ನಡೆದಿದ್ದು ಗೋರಖ್‌ಪುರ ಜಿಲ್ಲೆಯ ಗೋಲಾ ಎಂಬ ಪ್ರದೇಶದಲ್ಲಿ ಇಬ್ಬರು ದುಷ್ಕರ್ಮಿಗಳು ಅಪ್ರಾಪ್ತ ಬಾಲಕಿಯ ಅತ್ಯಾಚಾರಗೈದು ಸಿಗರೇಟ್‌ನಿಂದ ಸುಟ್ಟಿದ್ದಾರೆ.

 

 

ಭಾನುವಾರ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಬಾಲಕಿ ಸದ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂತ್ರಸ್ತೆಯ ತಾಯಿಯು ನೀಡಿದ ಲಿಖಿತ ದೂರಿನನ್ವಯ ಪೊಲೀಸರು ಡೆಹ್ರಿಬಾರ್ ಗ್ರಾಮದ ಅರ್ಜುನ್ ಮತ್ತು ಇನ್ನೊಬ್ಬ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.   ಇಟ್ಟಿಗೆ ಗೂಡು ಕಾರ್ಮಿಕರ ಅಪ್ರಾಪ್ತ ವಯಸ್ಕ ಪುತ್ರಿ ಶನಿವಾರ ರಾತ್ರಿ ಹ್ಯಾಂಡ್ ಪಂಪ್‌ನಿಂದ ನೀರು ತರಲು ಹೋಗಿದ್ದು, ಆ ಸಂದರ್ಭದಲ್ಲಿ ಆರೋಪಿಗಳು ಬೈಕ್‌ನಲ್ಲಿ ಬಾಲಕಿಯನ್ನು ಹಳ್ಳಿಯ ಕೊಳದ ಬಳಿಯ ಗುಡಿಸಲಿಗೆ ಬಲವಂತ ವಾಗಿ ಎಳೆದೊಯ್ದು  ಅ‌ತ್ಯಾಚಾರ ಎಸಗಿದ ಆರೋಪಿಗಳು ಸಿಗರೇಟ್‌ನಿಂದ ಸುಟ್ಟು ಬಾಲಕಿಯನ್ನು ಹಿಂಸಿಸಿ, ಪ್ರಜ್ಞೆ ತಪ್ಪಿಸಿ ಓಡಿ ಹೋಗಿದ್ದಾರೆ ಎಂದು ವರದಿಯಾಗಿದೆ.

Also Read  ಟರ್ಕಿಯಲ್ಲಿ ಭೂಕಂಪ: 9 ಮಂದಿ ಮೃತ್ಯು

 

 

error: Content is protected !!
Scroll to Top