ಮದುವೆಯಾದ 6 ತಿಂಗಳಲ್ಲೆ ಪತ್ನಿಗೆ ಬೆಂಕಿಯಿಟ್ಟು ಕೊಲ್ಲಲು ಯತ್ನಿಸಿದ ಪತಿ ► ಘಟನೆ ಬಳಿಕ ಕುಟುಂಬ ನಾಪತ್ತೆ..!!!

(ನ್ಯೂಸ್ ಕಡಬ) newskadaba.com ಬಳ್ಳಾರಿ,ಸೆ.15, ವರದಕ್ಷಿಣೆ ಹಣದ ಆಸೆಗಾಗಿ ಗೃಹಿಣಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ ದಾರುಣ ಘಟನೆ ಬಳ್ಳಾರಿಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮರಪ್ಪಿಹಾಳ ತಾಂಡದಲ್ಲಿ ಗುರುವಾರ ನಡೆದಿದೆ.

ಶೇ.80 ರಷ್ಟು ಸುಟ್ಟ ಗಾಯಳಿಂದ ಬಳಲುತ್ತಿರುವ ಸಂಗೀತಾರವರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಆನೇಕಲ್ ತಂಡದ ಸಂಗೀತಾ ಎಂಬ ಯುವತಿಯನ್ನು, ಮರಬ್ಬಿಪಾಳ್ ತಾಂಡದ ಪ್ರಕಾಶ್ ಎಂಬವರಿಗೆ ಕಳೆದ ಆರು ತಿಂಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ಸಂದರ್ಭದಲ್ಲಿ ವರದಕ್ಷಿಣೆಯಾಗಿ ಐವತ್ತು ಸಾವಿರ ನಗದು, ಮೂರು ತೊಲೆ ಬಂಗಾರ ಮತ್ತು ಬೈಕ್ ಅನ್ನು ನೀಡಲಾಗಿತ್ತು. ಆದ್ರೆ, ಮದುವೆಯಾದ ಬಳಿಕ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟ ವರನ ಕುಟುಂಬಸ್ಥರು ಸಂಗೀತಾರಿಗೆ ಪ್ರತಿ ನಿತ್ಯ ಕಿರುಕುಳ ನೀಡಲು ಆರಂಭಿಸಿದ್ದಾರೆ.

Also Read  ಪುತ್ತಿಲ ಪರಿವಾರದಿಂದ ನಿಡ್ಪಳ್ಳಿ ಗ್ರಾ.ಪಂ. ಅಭ್ಯರ್ಥಿಯಾಗಿ ಜಗನ್ನಾಥ್ ರೈ ನಾಮಪತ್ರ ಸಲ್ಲಿಕೆ

ಈ ಕುರಿತು ಸಂಗೀತಾ ತನ್ನ ಪೋಷಕರ ಬಳಿ ಹೇಳಿಕೊಂಡಿದ್ದಾರೆ. ಆದರೆ ಆರೋಪಿಯು ಗುರುವಾರ ಸಂಗೀತಾಳನ್ನು ಸೀಮೆ ಎಣ್ಣೆ ಸುರಿದು ಕೊಲೆ ಮಾಡಲು ಯತ್ನಿಸಿದ್ದಾನೆ.

ಘಟನೆಯ ಬಳಿಕ ಆರೋಪಿ ಪ್ರಕಾಶ್ ಕುಟುಂಬ ನಾಪತ್ತೆಯಾಗಿದೆ. ಘಟನೆ ಕುರಿತು ಹಗರಿಬೊಮ್ಮನ ಹಳ್ಳಿ ತಾಂಡದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

error: Content is protected !!
Scroll to Top