ಮಂಗಳೂರು: ಸ್ಕೂಟಿ ಹಾಗೂ ಡಿವೈಡರ್ ಗೆ ಢಿಕ್ಕಿಯಾದ ಬೈಕ್ – ಸವಾರ ಅದೃಷ್ಟವಶಾತ್ ಪಾರು



(ನ್ಯೂಸ್ ಕಡಬ) newskadaba.com ಮಂಗಳೂರು, ಆ. 16, ಬೈಕ್ ಒಂದು ಡಿವೈಡರ್ ಗೆ ಢಿಕ್ಕಿ ಹೊಡೆದು ಸವಾರನೋರ್ವ ಪವಾಡಸದೃಶವಾಗಿ ಪಾರಾದ ಘಟನೆ ಬೋಂದೇಲ್ ನಲ್ಲಿ ನಡೆದಿದೆ.





ಸ್ಕೂಟಿ ಸವಾರನೋರ್ವ ರೋಡ್ ಕ್ರಾಸ್ ಮಾಡುವ ಸಂದರ್ಭ ವಿರುದ್ದ ದಿಕ್ಕಿನಿಂದ ಬಂದ ಬೈಕ್ ನ್ನು ಕಂಡು ನಡು ರಸ್ತೆಯಲ್ಲೇ ನಿಲ್ಲಿಸಿದ್ದಾರೆ. ಈ ವೇಳೆ ವೇಗವಾಗಿ ಬಂದ ಬೈಕ್ ನಿಯಂತ್ರಣ ಸಿಗದೇ ಸ್ಕೂಟಿಗೆ ಢಿಕ್ಕಿ ಹೊಡೆದು ಬಳಿಕ ಡಿವೈಡರ್ ಗೆ ಢಿಕ್ಕಿಯಾದ ಪರಿಣಾಮ ಬೈಕ್ ಸವಾರ ರಸ್ತೆಗೆಸೆಯಲ್ಪಟ್ಟಿದ್ದು, ಪವಾಡ ಸದೃಶವಾಗಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಘಟನಾ ಸ್ಥಳಕ್ಕ್ಎ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






error: Content is protected !!
Scroll to Top