ತಲಕಾವೇರಿ ಭೂ ಕುಸಿತ ಪ್ರಕರಣ ಹಿನ್ನೆಲೆ ➤ ಮತ್ತೊಂದು ಮೃತ ದೇಹ ಪತ್ತೆ

(ನ್ಯೂಸ್ ಕಡಬ) newskadaba.com ಮಡಿಕೇರಿ, ಆ,15:   ತಲಕಾವೇರಿಯ ಗುಡ್ಡ ಕುಸಿತ ಪ್ರಕರಣದಲ್ಲಿ ಭೂ ಸಮಾದಿ ಅಗಿದ್ದ ಐವರ ಪೈಕಿ ಮತೊಂದು ಮೃತ ದೇಹ ಶನಿವಾರ ಪತ್ತೆ ಆಗಿದೆ.

ಕಳೆದ 10 ದಿನಗಳಿಂದಲೂ NDRF ಹಾಗೂ ಇತರ ಸಿಬ್ಬಂದಿಗಳು ಮೂರು ಹಿಟಾಚಿ ಬಳಸಿ ಮೃತ ದೇಹ ಮೇಲೆತ್ತಲು ಕಾರ್ಯಾಚರಣೆ ನಡೆಸುತಿದ್ದರು. ಈಗಾಗಲೇ ತಲಕಾವೇರಿ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್‌ ಮತ್ತು ಅವರ ಸಹೋದರ ಆನಂದ ತೀರ್ಥ ಅವರ ಮೃತ ದೇಹಗಳು ಪತ್ತೆ ಆಗಿದ್ದು ಈಗ ಸಿಕ್ಕಿರುವ ಮೃತ ದೇಹ ಕೊಳೆತ ಸ್ಥಿತಿಯಲ್ಲಿದ್ದು ಇನ್ನೂ ಗುರುತು ಪತ್ತೆ ಆಗಿಲ್ಲ.ಕಾರ್ಯಾಚರಣೆ ಸ್ಥಳದಲ್ಲಿ ನಾರಾಯಣ ಆಚಾರ್ ಅವರ ಪುತ್ರಿಯರಾದ ಶಾರದಾ ಮತ್ತು ನಮಿತ ಕೂಡ ಇದ್ದಾರೆ. ಈ ಪ್ರದೇಶದಲ್ಲಿ ದಟ್ಟ ಮಂಜು ಮತ್ತು ಮಳೆ ಬೀಳುತ್ತಿರುವುದರಿಂದ ಕಾರ್ಯಾಚರಣೆಗೆ ಅಡ್ಡಿ ಆಗಿದೆ.

Also Read  ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಂಗಡಿಗಳಿಗೆ ಬೆಂಕಿ ►ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

 

 

error: Content is protected !!
Scroll to Top