ಅಕ್ಷರದಾಸೋಹ ಆಹಾರ ಸಾಮಾಗ್ರಿಗಳ ಸಾಗಾಣಿಕೆ – ಇ-ಟೆಂಡರ್ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 14, ಆಗಸ್ಟ್ 2020 ರಿಂದ ಜುಲೈ 2021 ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಕೆ.ಎಫ್. ಮತ್ತು ಸಿ.ಎಸ್.ಸಿ ಸಗಟು ಮಳಿಗೆಯಿಂದ ಆಯಾ ತಾಲ್ಲೂಕಿನ ಅಕ್ಷರದಾಸೋಹ ಶಾಲಾ ಅಡುಗೆ ಕೇಂದ್ರಗಳಿಗೆ ಪೂರಕ ಆಹಾರ ಸಾಮಾಗ್ರಿಗಳನ್ನು ಸಾಗಾಣಿಕೆ ಮಾಡಲು ಅರ್ಹ ಟೆಂಡರ್‍ದಾರರಿಂದ ಅಲ್ಪಾವಧಿ ಇ-ಟೆಂಡರ್ ಕರೆಯಲಾಗಿದೆ.

ಆಸಕ್ತ ಟೆಂಡರುದಾರರು ಅರ್ಜಿ ಫಾರಂಗಳನ್ನು ಸೆಪ್ಟೆಂಬರ್ 1 ರೊಳಗೆ ಇ-ಪ್ರೊಕ್ಯೂರ್‍ಮೆಂಟ್ ಪೋರ್ಟಲ್ www.eproc.karnataka.gov.in ನಿಂದ ಡೌನ್‍ಲೋಡ್ ಮಾಡಿ ಸೆಪ್ಟೆಂಬರ್ 2 ರೊಳಗೆ ಇ-ಪ್ರೊಕ್ಯೂರ್‍ಮೆಂಟ್ ಮೂಲಕ ಸಲ್ಲಿಸಬಹುದು ಎಂದು ಶಿಕ್ಷಣಾಧಿಕಾರಿ, ಅಕ್ಷರದಾಸೋಹ ಕಚೇರಿ ಇವರ  ಪ್ರಕಟಣೆ ತಿಳಿಸಿದೆ.

Also Read  ದ್ವಿತೀಯ ಪಿಯುಸಿ ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟ..!

error: Content is protected !!
Scroll to Top