ತನ್ನ ಸಹೋದರಿಗೆ ಐಸ್‌ ಕ್ರೀಮ್‌ನಲ್ಲಿ ವಿಷ ಕೊಟ್ಟು ಕೊಲೆಗೈದ ಸಹೋದರ➤ ವಿಕೃತ ಮನಸ್ಸಿನ ಯುವಕ ಇದೀಗ ಪೊಲೀಸ್‌ ಅತಿಥಿ

(ನ್ಯೂಸ್ ಕಡಬ) newskadaba.com.ಕಾಸರಗೋಡು,ಆ.14:  ವಿಕೃತ ಮನಸ್ಸಿನ ಯುವಕನೊಬ್ಬ ತನ್ನ ಒಡ ಹುಟ್ಟಿದ ಸಹೋದರಿಗೆ ಐಸ್ ಕ್ರೀಮ್ ನಲ್ಲಿ ವಿಷ ಬೆರೆಸಿ ಕೊಲೆಗೈದು ನಂತರ ತನ್ನ ಹೆತ್ತವರಿಗೂ ಅದೇ ರೀತಿ ವಿಷ ಉಣಿಸಿದ ಪ್ರಕರಣವೊಂದು ವೆಳ್ಳರಿಕುಂಡು ಠಾಣೆ ವ್ಯಾಪ್ತಿಯ ಬಳಾಲ್ ನಲ್ಲಿ ತಡವಾಗಿ ವರದಿಯಾಗಿದೆ.


ಎರಡು ವಾರಗಳ ಹಿಂದೆ ಘಟನೆ ನಡೆದಿದ್ದು .ವಿಷಪ್ರಾಶನದಿಂದ ಸಹೋದರಿ ಮೃತ ಪಟ್ಟಿದ್ದು ತಂದೆ ಜೀವನ್ಮರಣದ ಹೋರಾಟ ನಡೆಸುತಿದ್ದಾರೆ, ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ವಾರಗಳ ಹಿಂದೆ ಮನೆಯಲ್ಲೇ ತಯಾರಿಸಿದ ಐಸ್ ಕ್ರೀಮ್ ನ್ನು ಸಹೋದರಿ ಹಾಗೂ ತಂದೆ- ತಾಯಿ ಸೇವಿಸಿದ್ದರು. ಐಸ್ ಕ್ರೀಮ್ ಸೇವಿಸಿದ ಬಳಿಕ ವಾಂತಿ ಬೇಧಿ ಸೇರಿದಂತೆ ಅಸ್ವಸ್ಥತೆ ಉಂಟಾಗಿತ್ತು.

ಹಳಸಿದ ಆಹಾರ ಸೇವನೆಯಿಂದ ಅಸ್ವಸ್ಥತೆ ಉಂಟಾಗಿದ್ದಾಗಿ ನಂಬಿ ಮೂವರು ಮನೆ ಮದ್ದನ್ನು ಸೇವಿಸಿದ್ದರು. ಎರಡು ದಿನಗಳ ಬಳಿಕ ಆನ್ ಮೇರಿ ಅಸ್ವಸ್ಥಗೊಂಡಿದ್ದು, ಇದರಿಂದ ಚೆರುಪ್ಪುಯದ ಆಸ್ಪತ್ರೆಗೆ ದಾಖಲಿಸಲಾಯಿತು. ಈ ನಡುವೆ ಆನ್ ಮೇರಿಗೆ ಹಳದಿ ಕಾಮಾಲೆ ಕಂಡುಬಂದಿತ್ತು. ಸ್ಥಿತಿ ಗಂಭೀರಗೊಂಡು ನಂತರ ಮೃತಪಟ್ಟರು. ಇದಲ್ಲದೆ ಬೆನ್ನಿ ಅವರ ಸ್ಥಿತಿಯೂ ಗಂಭೀರವಾಗಿದ್ದು, ಪಯ್ಯನ್ನೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಮನೆಯವರಿಗೆ ಉಪಾಯವಾಗಿ ವಿಷ ಉಣಿಸಿದ ಪುತ್ರ ಅಲ್ಬಿನ್ ಬೆನ್ನಿ ( 22) ಈ ಹಿಂದೆಯೂ ಇದೇ ರೀತಿ ಕೋಳಿ ಮಾಂಸದಲ್ಲಿ ವಿಷ ಬೆರೆಸಿ ಮನೆಯವರ ಕೊಲೆಗೆ ವಿಫಲ ಯತ್ನ ನಡೆಸಿದ ಎಂಬ ಮಾಹಿತಿ ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ.

Also Read  ಮಂಗಳೂರು: ಆಯುಧಗಳನ್ನು ಝಳಪಿಸುತ್ತಾ ಗೋವುಗಳ ಕಳ್ಳತನ ➤ ಆರೋಪಿಗಳ ಪತ್ತೆಹಚ್ಚಿ ಸೂಕ್ತ ಕ್ರಮಕ್ಕೆ ವಿಹಿಂಪ ಆಗ್ರಹ

ಕಿರಾತಕ ಕೊಲೆಗಾರ ಅಲ್ಬಿನ್ ಬೆನ್ನಿ ಸಹೋದರಿ ಆನ್ ಮೇರಿ (16) ಮೃತಪಟ್ಟವರು. ಗಂಭೀರ ಸ್ಥಿತಿಯಲ್ಲಿದ್ದ ಮೇರಿ ಆ. 5ರಂದು ಮೃತಪಟ್ಟಿದ್ದಾರೆ. ತಂದೆ ಬೆನ್ನಿ ಜಿಲ್ಲಾಸ್ಪತ್ರೆ ಹಾಗೂ ತಾಯಿ ಬೆಸ್ಸಿ ಕಣ್ಣೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡು ವಾರಗಳ ಹಿಂದೆ ಘಟನೆ ನಡೆದಿತ್ತು. ಪುಡ್ ಪ್ಹಾಯಿಸನ್ ನಿಂದಾಗಿ ಅಸ್ವಸ್ಥತೆ ಉಂಟಾಗಿರಬಹುದು ಎಂದು ಆರಂಭದಲ್ಲಿ ನಂಬಲಾಗಿತ್ತು. ಆದರೆ ಅನ್ನಾ ಮೇರಿ ಚಿಕಿತ್ಸೆ ಸ್ಪಂದಿಸದೆ ಮೃತಪಟ್ಟ ಹಿನ್ನೆಲೆಯಲ್ಲಿನಡೆಸಿದ ಮರಣೋತ್ತರ ಪರೀಕ್ಷೆಯಿಂದ ಆಕೆ ವಿಷ ಸೇವನೆಯಿಂದ ಮೃತಪಟ್ಟಿರುವುದಾಗಿ ಖಚಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು.

Also Read  ಬೆಳ್ಳಾರೆ: ಏ. 27ಕ್ಕೆ ಪ್ರವೀಣ್ ನೆಟ್ಟಾರು ಮನೆ ಗೃಹಪ್ರವೇಶ ➤ ಆಮಂತ್ರಣ ಪತ್ರಿಕೆ ಬಿಡುಗಡೆ

ತನಿಖೆ ನಡೆಸಿದ ಪೊಲೀಸರಿಗೆ ಕುಟುಂಬದ ನಾಲ್ವರ ಪೈಕಿ ಮೂವರ ದೇಹದೊಳಗೆ ವಿಷ ಪದಾರ್ಥ ಪತ್ತೆಯಾಗಿದ್ದರೂ ಆಲ್ಬಿನ್ ನಲ್ಲಿ ಪತ್ತೆಯಾಗಿರಲಿಲ್ಲ. ಹೀಗಾಗಿ ಆಲ್ಬಿನ್ ಬಗ್ಗೆ ಪೊಲೀಸರಿಗೆ ಸಂಶಯ ಉಂಟಾಗಿತ್ತು. ಇದರಿಂದ ಆಲ್ಬಿನ್ ನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಐಸ್ ಕ್ರೀಮ್ ನಲ್ಲಿ ಇಲಿ ವಿಷ ಬೆರೆಸಿ ನೀಡಿದ್ದಾಗಿ ಈತ ತಪ್ಪೊಪ್ಪಿಕೊಂಡಿದ್ದಾನೆ.

error: Content is protected !!
Scroll to Top