(ನ್ಯೂಸ್ ಕಡಬ) newskadaba.com ಪುತ್ತೂರು, ಆ,14: ಅತ್ಯಾಚಾರ ಎಸಗಿ ಅಪ್ರಾಪ್ತೆಯೊಬ್ಬಳನ್ನು ಗರ್ಭಿಣಿಯಾಗಿಸಿದ ಘಟನೆ ಬಡಗನ್ನೂರು ಎಂಬಲ್ಲಿ ನಡೆದಿದ್ದೂ ಆರೋಪಿಯನ್ನು ಬಂಧಿಸಲಾಗಿದೆ. ಬಡಗನ್ನೂರು ಗ್ರಾಮದ ಹರೀಶ್ ಎಂಬಾತ ಬಂಧಿತ ಆರೋಪಿ.

ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿದೆ. ವಿವಾಹವಾಗುವುದಾಗಿ ನಂಬಿಸಿ ಈತ ಆಕೆಯ ಮೇಲೆ ಬಲತ್ಕಾರ ನಡೆಸಿದರಿಂದ ಆಕೆ ಗರ್ಭಿಣಿಯಾಗಿದ್ದಾಳೆ ಎಂದು ಆರೋಪ ವ್ಯಕ್ತವಾಗಿದೆ. ಸಂತ್ರಸ್ತ ಬಾಲಕಿಯ ತಾಯಿ ಮತ್ತು ಆಶಾ ಕಾರ್ಯಕರ್ತೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಆರೋಪಿ ಹರೀಶ್ ವಿರುದ್ಧ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.









