ಪಂಜರ ಮೀನು ಕೃಷಿಗೆ ಅವಕಾಶ

(ನ್ಯೂಸ್ ಕಡಬ) newskadaba.com  ಮಂಗಳೂರು, ಆ. 13.  ದ.ಕ ಜಿಲ್ಲೆಯಲ್ಲಿ ನದಿ ಭಾಗ/ಹಿನ್ನೀರು ಪ್ರದೇಶಗಳಲ್ಲಿ, ಪಂಜರದಲ್ಲಿ ಮೀನುಕೃಷಿ ಕೈಗೊಳ್ಳಲು ವಿಫುಲ ಅವಕಾಶವಿರುತ್ತದೆ. ಇದರಿಂದ ತರಬೇತಿ ಪಡೆದವರಿಗೆ ನದಿ ಹಿನ್ನೀರು ಪ್ರದೇಶಗಳಲ್ಲಿ ಉದ್ಯೋಗಾವಕಾಶ ಒದಗಿಸಲಾಗುತ್ತದೆ. ಮೀನುಗಾರಿಕೆ ಇಲಾಖೆಯ ವಿವಿಧ ಯೋಜನೆಯಡಿ ಸಹಾಯಧನ, ಸೌಲಭ್ಯ, ತರಬೇತಿ ಕಲ್ಪಿಸಿಕೊಡಲಾಗುತ್ತದೆ.


ಆಸಕ್ತ ಯುವಕರು, ಯುವತಿಯರು ತಮ್ಮ ಹೆಸರನ್ನು ಆಗಸ್ಟ್ 25 ರೊಳಗೆ ಮೀನುಗಾರಿಕೆ ಸಹಾಯಕ ನಿರ್ದೆಶಕರು (ಶ್ರೇಣಿ-2) ಮಂಗಳೂರು, ಮಾಹಿತಿ ಕೇಂದ್ರ ಕಟ್ಟಡ, ಸೌತ್‍ವಾರ್ಫ್ ಬಂದರು ಮಂಗಳೂರು ಇಲ್ಲಿ ನೊಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೆಶಕರು (ಶ್ರೇಣಿ-2) ಮಂಗಳೂರು, ಮಾಹಿತಿ ಕೇಂದ್ರ ಕಟ್ಟಡ, ಸೌತ್‍ವಾರ್ಫ್ ಬಂದರು ಮಂಗಳೂರು, ಮೊಬೈಲ್ ಸಂಖ್ಯೆ: 9606313259 ಸಂರ್ಪಕಿಸುವಂತೆ ಮಂಗಳೂರು ಮೀನುಗಾರಿಕೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

Also Read  ಗಲಾಟೆ ತಡೆಯಲು ಬಂದ ಪೊಲೀಸರಿಗೆ ಹಲ್ಲೆ ➤ ಆರೋಪಿಗೆ ಥಳಿಸಿದ ಸಾರ್ವಜನಿಕರು

error: Content is protected !!
Scroll to Top