ಕೋಳಿ ಅಂಕಕ್ಕೆ ದಾಳಿ ಮಾಡಿದ ಈಶ್ವರಮಂಗಲ ಹೊರಠಾಣಾ ಪೋಲಿಸರು➤ ಕೋಳಿ‌, ಬೈಕ್ ಸಹಿತ ಮೂವರ ಬಂಧನ

(ನ್ಯೂಸ್ ಕಡಬ) newskadaba.com.ಪುತ್ತೂರು,ಆ.13: ಬಡಗನ್ನೂರು ಗ್ರಾಮದ ಶರವು ಎಂಬಲ್ಲಿನ ಗುಡ್ಡದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ಮಾಡಿದ ಈಶ್ವರಮಂಗಲ ಹೊರಠಾಣಾ ಪೋಲಿಸರ ತಂಡ ಕೋಳಿ ಅಂಕದಲ್ಲಿ ನಿರತರಾಗಿದ್ದ ಮೂವರನ್ನು ಬಂಧಿಸಿ, 5ಕೋಳಿ ಮತ್ತು 3 ಬೈಕ್‌ಗಳನ್ನು ವಶಕ್ಕೆ ಪಡೆದು ಕೊಂಡ ಘಟನೆ ವರದಿಯಾಗಿದೆ.


ಬುಧವಾರ ಸಂಜೆ ಸಂಪ್ಯ ಪೊಲೀಸ್‌ ಠಾಣೆಯ ಎಸ್.ಐ ಅವರ ಸೂಚನೆಯಂತೆ ಈಶ್ವರಮಂಗಲ ಹೊರಠಾಣೆಯ ಎ.ಎಸ್.ಐ ತಮ್ಮಯ್ಯ ಗೌಡ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಡಗನ್ನೂರು ಗ್ರಾಮದ ಶರವು ಎಂಬಲ್ಲಿನ ಗುಡ್ಡೆಯಲ್ಲಿ ಕೋಳಿ ಅಂಕದಲ್ಲಿ ನಿರತರಾಗಿದ್ದ ಹರೀಶ್‌ ಕುಮಾರ್‌, ದಯಾನಂದ, ಚನಿಯಪ್ಪ ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ಅವರಿಂದ 1400 ನಗದು, ಮೊಬೈಲ್‌ಗಳು ಮತ್ತು 5ಕೋಳಿಗಳು ಎರಡು ಬೈಕ್‌ ಒಂದು ಸ್ಕೂಟರ್‌ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Also Read  ಕೆಪಿಸಿಸಿ ಮಾಧ್ಯಮ ವಕ್ತಾರರಾಗಿ ಆಯ್ಕೆಯಾದ ಶವಾದ್ ಗೂನಡ್ಕರವರಿಗೆ ಹುಟ್ಟೂರ ಸನ್ಮಾನ

error: Content is protected !!
Scroll to Top