ಮಂಗಳೂರಿನಲ್ಲಿ ಕೊರೊನಾಗೆ ಪ್ಲಾಸ್ಮಾ ಚಿಕಿತ್ಸೆ ಆರಂಭ

(ನ್ಯೂಸ್ ಕಡಬ) newskadaba.com.ಮಂಗಳೂರ,ಆ.13: ಕೊರೊನಾ ರೋಗಕ್ಕೆ ದೇಶದೆಲ್ಲೆಡೆ ಔಷಧಿ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದರೆ. ಇತ್ತ ಈಗಾಗಲೇ ಕೊರೊನಾ ರೋಗಕ್ಕೆ ಮದ್ದಾಗಿರುವ ಪ್ಲಾಸ್ಮಾ ಚಿಕಿತ್ಸೆಯು ಮುಂದುವರಿಯುತ್ತಿದೆ. ಕೋವಿಡ್-19 ರೋಗಿಗಳಿಗೆ ಕರೊನಾದಿಂದ ಗುಣಹೊಂದಿದವರ ಪ್ಲಾಸ್ಮಾ ನೀಡಿ ರೋಗ ಗುಣಪಡಿಸುವ ‘ಪ್ಲಾಸ್ಮಾ ಚಿಕಿತ್ಸೆ’ಇದೀಗ ಮಂಗಳೂರಿನಲ್ಲಿಯೂ ಆರಂಭವಾಗಿದೆ.


ನಗರದಲ್ಲಿರುವ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಈಗಾಗಲೇ 4 ಮಂದಿಗೆ ಈ ಪ್ಲಾಸ್ಮಾ ಚಿಕಿತ್ಸೆ ನೀಡಲಾಗಿದೆ. ಮಂಗಳೂರಿನಲ್ಲಿ ಪ್ಲಾಸ್ಮಾ ಸಂಗ್ರಹ ಕೇಂದ್ರ ಇಲ್ಲದಿರುವುದರಿಂದ ಬೆಂಗಳೂರಿನ ಎಚ್‌ಸಿಜಿ ಪ್ಲಾಸ್ಮಾ ಬ್ಯಾಂಕ್‌ನಿಂದ ಪ್ಲಾಸ್ಮಾ ತಂದು ಚಿಕಿತ್ಸೆ ನೀಡಲಾಗುತ್ತಿದೆ. ಕೆಲದಿನಗಳ ಹಿಂದೆ ವೃದ್ಧೆಯೊಬ್ಬರಿಗೆ ಪ್ಲಾಸ್ಮಾ ತಂದು ಚಿಕಿತ್ಸೆ ನೀಡಲಾಗಿತ್ತು. ಇತ್ತೀಚೆಗಷ್ಟೇ ಭಟ್ಕಳ ಮೂಲದ 85 ವರ್ಷ ಪ್ರಾಯದ ವೃದ್ಧರೊಬ್ಬರ ಚಿಕಿತ್ಸೆಗೆ ಅಗತ್ಯವಿದ್ದ ಪ್ಲಾಸ್ಮಾವನ್ನು ಕರೊನಾದಿಂದ ಗುಣಹೊಂದಿದ ಅನಿವಾಸಿ ಉದ್ಯಮಿ ಬಜ್ಪೆಯ ಹೈದರ್ ಅಲಿ ಮತ್ತು ಸುರತ್ಕಲ್ ಇಡ್ಯಾದ ವಕೀಲ ಜೀಶಾನ್ ಅಲಿ ದಾನ ಮಾಡಿದ್ದರು.

Also Read  ಮಂಗಳೂರು: ವಿಮಾನ ನಿಲ್ದಾಣದಲ್ಲಿ 2.60 ಕೋಟಿ ರೂ. ಮೌಲ್ಯದ ವಜ್ರ ವಶ


ರಾಜ್ಯದ ಏಕೈಕ ಪ್ಲಾಸ್ಮಾ ಸಂಗ್ರಹ ಕೇಂದ್ರವಾಗಿರುವ ಬೆಂಗಳೂರಿನ ಎಚ್‌ಸಿಜಿ ಆಸ್ಪತ್ರೆಯ ಪ್ಲಾಸ್ಮಾ ಬ್ಯಾಂಕ್‌ನಿಂದ ಈಗಾಗಲೇ ವಿವಿಧ ಜಿಲ್ಲೆಗಳಿಗೆ ಪ್ಲಾಸ್ಮಾ ರವಾನಿಸಲಾಗುತ್ತಿದೆ. ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಸಂಗ್ರಹಕ್ಕೆ ವ್ಯವಸ್ಥೆ ಇದೆಯಾದರೂ, ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ಇನ್ನೂ ಅನುಮತಿ ಸಿಕ್ಕಿಲ್ಲ. ಆದರೂ ಸಾಕಷ್ಟು ಸಂಖ್ಯೆಯ ‘ಪ್ಲಾಸ್ಮಾ’ ದಾನಿಗಳಿದ್ದಾರೆ. ಆದರೆ ಪ್ಲಾಸ್ಮಾ ಸಂಗ್ರಹ ಕೇಂದ್ರವಿರದ ಕಾರಣ ದಾನ ಮಾಡುವವರು ಬೆಂಗಳೂರಿಗೆ ಹೋಗಬೇಕಿದೆ.

error: Content is protected !!
Scroll to Top