ಪೊಯ್ಯೆಗುಡ್ಡೆ-ಮದ್ದಡ್ಕ ಸಂಪರ್ಕ ರಸ್ತೆ ಗ್ರಾಮ ಪಂಚಾಯತ್‌ನಿಂದ ದುರಸ್ಥಿ

(ನ್ಯೂಸ್ ಕಡಬ) newskadaba.com.ಬೆಳ್ತಂಗಡಿ,ಆ.12: ವಾರಗಳ ಹಿಂದೆ ಸುರಿದ ಕುಂಭದ್ರೋಣ ಮಳೆಯಿಂದಾಗಿ ಕುಡೆರಂಜ ಎಂಬಲ್ಲಿ ಪೊಯ್ಯಗುಡ್ಡೆ-ಮದ್ದಡ್ಕ ಸಂಪರ್ಕಿಸುವ ಸಂಪರ್ಕ ರಸ್ತೆ ಕೊಚ್ಚಿ ಹೊಗಿತ್ತು ಇದನ್ನು ಪಂಚಾಯತ್‌ ವತಿಯಿಂದ ಇಂದು ದುರಸ್ಥಿ ಪಡಿಸಲಾಯಿತು.

 

ಪಡಂಗಡಿ ಗ್ರಾಮ ಪಂಚಾಯತ್‌ ಮಾಜಿ ಉಪಾಧ್ಯಕ್ಷ ಸಂತೋಷ್‌ ಕುಮಾರ್‌ ಜೈನ್‌ ಮುಂದಾಳತ್ವದಲ್ಲಿ ಪಂಚಾಯತ್‌ ವತಿಯಿಂದ ಮೋರಿ ಹಾಗೂ ಜೆಸಿಬಿ ಮೂಖಾಂತರ ಮಣ್ಣು ಹಾಕಿ ಸರಿಪಡಿಸಿ ವಾಹನ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಿಕೊಡಲಾಯಿತು. ರಸ್ತೆ ದುರಸ್ಥಿಯ ಸಂದರ್ಭ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಸಾರ್ವಜನಿಕರು ಉಪಸ್ಥಿತರಿದ್ದು ರಸ್ತೆ ದುರಸ್ಥಿಗೆ ಸಹಕರಿಸಿದರು.

Also Read  ? ಸುಬ್ರಹ್ಮಣ್ಯ: ಉಯ್ಯಾಲೆಯಲ್ಲಿ ಆಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಹಗ್ಗ ಬಿಗಿದು ಬಾಲಕಿ ಮೃತ್ಯು

error: Content is protected !!
Scroll to Top