ಗಾಂಜಾ ಮತ್ತಿನಲ್ಲಿ ಕಾರು ಚಲಾಯಿಸಿ ಸ್ಕೂಟರ್‌ಗೆ ಡಿಕ್ಕಿ ➤ ಸ್ಕೂಟರ್‌ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com.ಮಂಜೇಶ್ವರ,ಆ.12: ಗಾಂಜಾ ಸೇವಿಸಿ ಕಾರು ಚಲಾಯಿಸಿದ ಪರಿಣಾಮ ಸ್ಕೂಟರ್ ಗೆ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಮೃತಪಟ್ಟ ದಾರುಣ ಘಟನೆ ಮಂಗಳವಾರ ಸಂಜೆ ಉಪ್ಪಳ ಬಳಿಯ ಬೇಕೂರಿನಲ್ಲಿ ನಡೆದಿದೆ.‌


ಮೃತಪಟ್ಟವರನ್ನು ಬೇಕೂರು ಬೊಳ್ಳಾರಿನ ಕೆ.ರಾಮ ಭಟ್ (62) ಎಂದು ಗುರುತಿಸಲಾಗಿದೆ. ರಾಮ ಭಟ್ ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ಅತೀ ವೇಗದಿಂದ ಬಂದ ಕಾರು ಡಿಕ್ಕಿ ಹೊಡೆದಿದೆ, ಡಿಕ್ಕಿಯ ರಭಸಕ್ಕೆ ಸ್ಕೂಟರ್‌ ಮಾರುದ್ದ ಹೋಗಿ ಬಿದ್ದಿದೆ. ಅಪಘಾತ ನಡೆದ ತಕ್ಷಣ ಸ್ಥಳಕ್ಕೆ ಬಂದ ಸ್ಥಳೀಯರ ಪ್ರಕಾರ ಕಾರು ಚಾಲಕ ಗಾಂಜಾ ಸೇವಿಸಿದ್ದ ಎಂದು ತಿಳಿಸಿದ್ದಾರೆ . ಅಪಘಾತ ನಡೆದ ಸಂದರ್ಭದಲ್ಲೇ ಈ ದಾರಿಯಾಗಿ ಪೊಲೀಸ್ ಜೀಪು ಬರುವುದನ್ನು ಗಮನಿಸಿದ ಈತ ಕಾರು ಬಿಟ್ಟು ಸಮೀಪದ ನಿರ್ಜನ ಸ್ಥಳದ ಮೂಲಕ ಪರಾರಿಯಾಗಿದ್ದಾನೆ.

Also Read  ಮಂಗಳೂರು: ನಾಳೆ ದ.ಕ, ಉಡುಪಿ ಜಿಲ್ಲೆಯಲ್ಲಿ ರೆಡ್‌ ಅಲರ್ಟ್‌ ➤ ಹವಾಮಾನ ಇಲಾಖೆ ಮುನ್ಸೂಚನೆ


ಈತ ಏಳಕ್ಕೂ ಅಧಿಕ ಪ್ರಕರಣಗಳ ಆರೋಪಿಯಾಗಿದ್ದು.ಅಪಘಾತಕ್ಕಿಂತ ಮೊದಲು ಈತ ನಿರ್ಲಕ್ಷದಿಂದ ಕಾರು ಚಲಾಯಿಸಿ ಸ್ಥಳೀಯರಲ್ಲಿ ಭಯ ಹುಟ್ಟಿಸಿದ್ದನು ಸ್ಥಳೀಯರು ಈತನನ್ನು ಹಿಡಿಯಲು ಪ್ರಯತ್ನಿಸಿದಾಗ ಕಾರು ಸಹಿತ ಅತೀ ವೇಗದಲ್ಲಿ ಪರಾರಿಯಾಗಲೆತ್ನಿಸಿದ್ದು , ಈ ಸಂದರ್ಭದಲ್ಲಿ ಅಪಘಾತ ನಡೆದಿದೆ. ಈ ಕುರಿತು ಮಂಜೇಶ್ವರ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

error: Content is protected !!
Scroll to Top