ರಾಜ್ಯಕ್ಕೆ ಟಾಪರ್ ಆಗಿ ಸಾಧನೆಗೈದ ಅನುಷ್‍ರವರಿಗೆ ಕುಕ್ಕೆ ದೇವಳದದಿಂದ ಸನ್ಮಾನ

(ನ್ಯೂಸ್ ಕಡಬ) newskadaba.com ಕಡಬ, ಆ.11: ಕುಮಾರಸ್ವಾಮಿ ಆಂಗ್ಲ ಮಾದ್ಯಮ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ SSLC ಯಲ್ಲಿ ರಾಜ್ಯಕ್ಕೆ ಟಾಪರ್ ಆಗಿ ಹೋರ ಹೊಮ್ಮಿದ ಅನುಷ್ ಎಣ್ಣೆಮಜಲು ಅವರನ್ನು ಇಂದು ಕುಕ್ಕೆ ಸುಬ್ರಹ್ಮಣ್ಯ ಶ್ರೀ ದೇವಸ್ಥಾನದ ವತಿಯಿಂದ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.

 

ರಾಜ್ಯಕ್ಕೆ ಪ್ರಥಮ ಸ್ಥಾನ ಗಿಟ್ಟಿಸಿಕೊಂಡು ಎಸ್. ಎಸ್. ಎಲ್. ಸಿ ಯಲ್ಲಿ ಸಾಧನೆಗೈದು ದಕ್ಷಿಣ ಕನ್ನಡದ ಕೀರ್ತಿ ಪತಾಕೆಯನ್ನ ಹಾರಿಸಿದ, ಅನುಷ್ ಎಣ್ಣೆಮಜಲು ಅವರನ್ನು ಇಂದು ಕುಕ್ಕೆ ಸುಬ್ರಹ್ಮಣ್ಯ ಶ್ರೀ ದೇವಸ್ಥಾನದ ವತಿಯಿಂದ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ದೇವಳದ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ ಎಂ. ಎಚ್ ಅವರು ಗೌರವ ಪೂರ್ವಕವಾಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಎಂಜಿನಿಯರ್ ಉದಯಕುಮಾರ್, ವೆಂಕಟರಾಜು, ಗೋಪಿನಾಥ್ ನಂಬೀಶ, ಸನ್ಮಾನಿತಾರದ ಅನುಷ್ ತಂದೆ ಲೊಕೇಶ್ ಎಣ್ಣೆಮಜಲು, ತಾಯಿ ಉಷಾ, ಹಾಗೂ ಸಹೋದರ ಆಕಾಶ್, ದೇವಳದ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Also Read  ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ➤ ಆರು ಮಂದಿ ಗೆಲುವು

 

 

error: Content is protected !!
Scroll to Top