(ನ್ಯೂಸ್ ಕಡಬ) newskadaba.com ಮಂಗಳೂರು , ಆ.11: ಪಾಂಡೇಶ್ವರಲ್ಲಿರುವ ಶ್ರೀನಿವಾಸ್ ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿಗಳಿಗೆ ಉನ್ನತ ಶಿಕ್ಷಣದ ಮುಂದಿನ ದಿನಗಳಲ್ಲಿ ಅಳವಡಿಸುವ ಹೊಸ ವೇದಿಕೆಗಳು ಹಾಗೂ ಅವುಗಳ ಕಾರ್ಯತಂತ್ರ ಎನ್ನುವ ವಿಷಯದ ಕುರಿತು ಮಾಹಿತಿ ಕಾರ್ಯಗಾರವನ್ನು ಆಯೋಜಿಸಲಾಯಿತು. ಸಂಪೂನ್ಮೂಲ ವ್ಯಕ್ತಿಯಾಗಿ ಬೆಂಗಳೂರಿನ ಓಡಿನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಿನ್ ಕುಮಾರ್ ಮಾಹಿತಿ ನೀಡಿದರು.
ಈ ವೇಳೆ ಓಡಿನ್ ಎಕ್ಸ್ಲಾನ್ಸ್ ನ ಶ್ರೀನಿವಾಸ್ ರಾವ್, ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಎಸ್. ಐತಾಳ್, ಸಿ.ಸಿ.ಐ.ಎಸ್., ಸಿ.ಎಸ್.ಎಸ್.ಹೆಚ್., ಸಿ.ಹೆಚ್.ಎಂ.ಟಿ., ಸಿ.ಎಂ.ಸಿ., ಸಿ.ಎ.ಎಸ್. ಸಿ.ಎಡ್. ಸಿ.ಪಿ.ಟಿ.ಯ ಡೀನ್‌ಗಳು ಹಾಗು ಸಿಬ್ಬಂದಿಗಳು ಉಪಸ್ಥಿತರಿದ್ದರು. ಪ್ರೊ ಶ್ರೀಧರ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.