ಯುವಕನ ಅಪಹರಣ ಪ್ರಕರಣ➤ ವಿಟ್ಲದ ಬ್ಲೇಡ್‌ ಸಾದಿಕ್‌ ಬಂಧನ

(ನ್ಯೂಸ್ ಕಡಬ) newskadaba.com.ವಿಟ್ಲ,ಆ.11: ಬಟ್ಟೆ ಖರೀದಿಗೆಂದು ಹೋದಗ ಯುವಕನೊಬ್ಬನನ್ನು ಪ್ರೀತಿಸಿ ಮದುವೆಯಾದ ಎಂಬ ಕಾರಣಕ್ಕೆ ಅಪಹರಣಮಾಡಲು ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ವಿಟ್ಲ ಠಾಣಾಧಿಕಾರಿ ವಿನೋದ್‌ ರೆಡ್ಡಿ ಮತ್ತು ಪೊಲೀಸರ ತಂಡ ಆರೋಪಿಯನ್ನು ಬಂಧಿಸಿದ್ದು, ಇನ್ನೋರ್ವನಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಜು. 29ರಂದು ಅಪರಾಹ್ನ ಬಕ್ರೀದ್‌ ಹಬ್ಬಕ್ಕೆ ಬಟ್ಟೆ ಖರೀದಿಗೆ ಅಬ್ದುಲ್‌ ಬಶೀರ್‌ ವಿಟ್ಲದಲ್ಲಿರುವ ಎಂಪಯರ್‌ ಮಾಲ್‌ಗೆ ಬಂದಿದ್ದರು. ಆಗ ಅವರ ಪರಿಚಯದ ಸಿದ್ದಿಕ್‌ ಮಾತನಾಡಲಿದೆಯೆಂದು ಕರೆದು ಸ್ಕಾರ್ಪಿ ಯೋದಲ್ಲಿ ಕುಳಿತುಕೊಳ್ಳಲು ಹೇಳಿದಾಗ ಆರೋಪಿ ಸಾ ದಿಕ್‌ ಯಾನೆ ಬ್ಲೇಡ್‌ ಸಾದಿಕ್‌ ಕಾರಿನೊಳಗಿದ್ದ. ಆತನನ್ನು ಗಮನಿಸಿ ಕಾರು ಹತ್ತಲು ಬಶೀರ್‌ ಹಿಂಜರಿದಾಗ ಇಬ್ಬರು ಸೇರಿ ಬಶೀರ್‌ನನ್ನು ಕಾರಿನೊಳಗೆ ಬಲವಂತ ವಾಗಿ ದೂಡಿ ಕೂರಿಸಿಕೊಂಡು ಪುತ್ತೂರು ಕಡೆಗೆ ಹೋಗಿದ್ದು, ಅನಂತರ ಕಾರು ಕಂಬಳಬೆಟ್ಟುವಿನಲ್ಲಿ ಯಾವುದೋ ಕಾರಣಕ್ಕೆ ನಿಲ್ಲಿಸಿದಾಗ ಬಶೀರ್‌ ಕಾರಿನಿಂದ ಜಿಗಿದು ತಪ್ಪಿಸಿಕೊಂಡು ಪರಾರಿಯಾಗಿ ಮನೆಗೆ ಬಂದಿದ್ದ.

Also Read  ಮುಂಬೈ ವಾಲ್ಕೇಶ್ವರ ಶ್ರೀಕಾಶಿ ಮಠಕ್ಕೆ ಭೇಟಿ - ಜಿಎಸ್ಬಿ ಸೇವಾ ಮಂಡಲ ಶ್ರೀ ಗಣೇಶನ ದರ್ಶನ ಪಡೆದ ಸಂಸದ ಕ್ಯಾ.ಚೌಟ

ಆ ಬಳಿಕವೂ ಬಶೀರ್‌ ಮೊಬೈಲ್‌ಗೆ ಸಂದೇಶ ಮತ್ತು ಕರೆ ಮಾಡಿ ಕೊಲ್ಲುವುದಾಗಿ ಸಾದಿಕ್‌ ಬೆದರಿಕೆ ಹಾಕುತ್ತಲೇ ಇದ್ದ. ಅಬೂಬಕರ್‌ ಅವರ ಪುತ್ರಿಯನ್ನು ಪ್ರೀತಿಸಿ ಮದುವೆ ಯಾದ ವಿಚಾರದಲ್ಲಿ ಸಾದಿಕ್‌ ಮತ್ತು ಸಿದ್ದಿಕ್‌ ಅಪಹರಣ ಮಾಡಿದ್ದಾರೆ ಮತ್ತು ಕೊಲ್ಲುವ ಸಂಚು ಹೂಡಿದ್ದಾರೆ ಎಂದು ಬಶೀರ್‌ ವಿಟ್ಲ ಠಾಣೆ ಯಲ್ಲಿ ತಡವಾಗಿ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮಾಡಿದ ವಿಟ್ಲ ಪೊಲೀಸರು ಸಾದಿಕ್‌ನನ್ನು ಸೋಮವಾರ ಬೆಳಗ್ಗೆ ವಿಟ್ಲದಲ್ಲಿ
ಬಂಧಿಸಿದ್ದಾರೆ. ಬಂಧಿತ ಹಳೆಯ ಆರೋಪಿ ವಿಟ್ಲ ನಿವಾಸಿ ಸಾದಿಕ್‌ ಯಾನೆ ಬ್ಲೇಡ್‌ ಸಾದಿ ಕ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಸಾದಿಕ್‌ ಮೇಲೆ ವಿಟ್ಲದಲ್ಲಿ 10, ಪುತ್ತೂರು ಗ್ರಾಮಾಂತರದಲ್ಲಿ 1, ಪುತ್ತೂರು ಟೌನ್‌ 2, ಉಪ್ಪಿನಂಗಡಿ ಠಾಣೆಯಲ್ಲಿ 1 ಪ್ರಕರಣ ಸಹಿತ ಒಟ್ಟು 14 ಪ್ರಕರಣಗಳು ದಾಖಲಾಗಿವೆ. ಪುತ್ತೂರು ಶೂಟ್‌ ಔಟ್‌ ಪ್ರಕರಣದ ರೂವಾರಿಯಾಗಿ ಓರ್ವನ ಕೊಲೆಗೆ ಯತ್ನಿಸಿದ ಆರೋಪದಲ್ಲಿ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಿ ಕಳೆದ ತಿಂಗಳಷ್ಟೆ ಈತ ಹೊರಬಂದಿದ್ದ.

Also Read  ಇಂದು ಶ್ರೀಲಂಕಾದಲ್ಲಿ ಅಧ್ಯಕ್ಷೀಯ ಚುನಾವಣೆ- ಮತದಾನ ಆರಂಭ

error: Content is protected !!