ಉಡುಪಿ ತ್ಯಾಜ್ಯ ಡಬ್ಬಿಯಲ್ಲಿ ನವಜಾತ ಹೆಣ್ಣು ಮಗು ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಆ.10,ಉಡುಪಿ: ನಗರದ ಸರಕಾರಿ ಆಸ್ಪತ್ರೆಯ ಮುಂಭಾಗ ತ್ಯಾಜ್ಯದ ಡಬ್ಬಿಗೆ ನವಜಾತ ಹೆಣ್ಣು ಶಿಶುವನ್ನು ಎಸೆದು ಹೋದ ಘಟನೆ ಸೋಮವಾರ ಮುಂಜಾನೆ ಬೆಳಕಿಗೆ ಬಂದಿದೆ.


ನಗರದ ಚಿತ್ತರಂಜನ್ ಸರ್ಕಲ್ ಬಳಿ ಇಂದು ಬೆಳಿಗ್ಗೆ ನಗರ ಸಭೆಯ ಸ್ವಚ್ಚತಾ ಸಿಬಂದಿಗಳು ಹೊಟೇಲ್ನವರು ಎಸೆದ ಬಾಳೆ ಎಲೆಯ ತ್ಯಾಜ್ಯದ ಸಂಗ್ರಹಿಸಲು ಬಂದಾಗ ತ್ಯಾಜ್ಯದ ಡಬ್ಬಿಯಲ್ಲಿ ನವಜಾತ ಹೆಣ್ಣು ಮಗುವನ್ನು ಎಸೆದು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.


ತ್ಯಾಜ್ಯ ತುಂಬಿದ್ದ ಡಬ್ಬಿಯಲ್ಲಿ ನವಜಾತ ಶಿಶು ಅಳುವುದನ್ನು ಗಮನಿಸಿದ ಪೌರ ಕಾರ್ಮಿಕರು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಸದ್ಯ ನಗರದ ಬಿ.ಆರ್ ಶೆಟ್ಟಿ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Also Read  ಕಲ್ಲುಗುಡ್ಡೆ: ಬುಡ ಸಮೇತ ಉರುಳಿ ಬಿದ್ದ ಹಲಸಿನ ಮರ ➤ ಮನೆಗೆ ಹಾನಿ

error: Content is protected !!
Scroll to Top