ಕರ್ನಾಟಕ ಕೇರಳ ಗಡಿಯಲ್ಲಿ ಗುಡ್ಡ ಕುಸಿತ ➤ ಅಪಾಯದ ಅಂಚಿನಲ್ಲಿ ಜನತೆ

(ನ್ಯೂಸ್ ಕಡಬ) newskadaba.com ಕಡಬ: ಆ.10,. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಲಲ್ಲಿ ಪ್ರಕೃತಿವಿಕೋಪಗಳು ಸಂಭವಿಸುತ್ತಲೇ ಇದೆ.  ಕರ್ನಾಟಕ ಕೇರಳ ಗಡಿ ಪ್ರದೇಶವಾಗಿರುವ ಬಡ್ಡಡ್ಕ ಸಮೀಪದ ಬಾಟೋಳಿ ಎಂಬಲ್ಲಿ ನಿರಂತರ ಸುರಿದ ಮಳೆಯಿಂದಾಗಿ ಗುಡ್ಡ ಕುಸಿದಿದೆ.

ಕಳೆದ ವರ್ಷ ಇದೇ ಸ್ಥಳದಲ್ಲಿ ಭೂಮಿ ಬಿರುಕು ಬಿಟ್ಟಿತ್ತು. ಈ ಬಾರಿ ಸುಮಾರು ಎರಡು ಎಕರೆಯಷ್ಟು ಜಾಗ, ಇನ್ನೂರು ಮೀಟರ್ ದೂರಕ್ಕೆ ಗುಡ್ಡ ಜರಿದಿದೆ. ಎರಡು ಮೀಟರ್ ಅಗಲದಲ್ಲಿ ಮಣ್ಣು ಕುಸಿದಿದ್ದು ಪರಿಸರದ ಜನತೆಯಲ್ಲಿ ಆತಂಕ ಮನೆ ಮಾಡಿದೆ.

error: Content is protected !!
Scroll to Top