ಓವನ್ ಸ್ಪೋಟ ಬೇಕರಿ ಮಾಲಕ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಆ.10.ಸಾಸ್ತಾನ: ಬೇಕರಿ ಮಾಲಕರೋರ್ವರು ತನ್ನ ಬೇಕರಿಯಲ್ಲಿ  ಗ್ಯಾಸ್ ಸ್ಪೋಟಗೊಂಡು ದಾರುಣವಾಗಿ  ಮೃತಪಟ್ಟ ಘಟನೆ ಸೋಮವಾರ ಮುಂಜಾನೆ ಸಂಭವಿಸಿದೆ.

ಕೆಲವು ದಿನ ಬಂದ್ ಮಾಡಲಾಗಿದ್ದ ಮಾಬುಕಳದ ಬೇಕರಿ ಆಹಾರ ತಯಾರಿಸುವ ಘಟಕಕ್ಕೆ ಹೋದ ಮಾಲಕ ರೋಬರ್ಟ್ ಪುಟಾರ್ಡೊ(58), ಮೈಕ್ರೋ ಓವನ್ ನ ಚಾಲನೆ ಮಾಡುವ ಸಂಧರ್ಭ ಹತ್ತಿರ ಇದ್ದ ಗ್ಯಾಸ್ ಸೋರಿಕೆಯಾಗಿದ್ದರಿಂದ ಸಿಲಿಂಡರ್ ಸಿಡಿದು ಅವರು ಸ್ಥಳದಲ್ಲೇ ಮೃತ ಪಟ್ಟರೆಂಬ ತಿಳಿದು ಬಂದಿದೆ. ಕೋಟ ಪೊಲೀಸರು ಸ್ಥಳಕೆ ಧಾವಿಸಿ ಪರೀಶಿಲನೆ ನಡೆಸಿದ್ದಾರೆ.

Also Read  ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಗೆ ಹೊರಗುತ್ತಿಗೆ ಆಧಾರದಲ್ಲಿ ಬಾಡಿಗೆಗೆ ವಾಹನ ಒದಗಿಸಲು ಟೆಂಡರ್ ಆಹ್ವಾನ

error: Content is protected !!
Scroll to Top