ಪಂಜ ಅರಣ್ಯಾಧಿಕಾರಿಗಳ ಭರ್ಜರಿ ಕಾರ್ಯಾಚರಣೆ➤ ಅಕ್ರಮವಾಗಿ ಸಾಗಿಸುತ್ತಿದ್ದ ಮರದ ದಿಮ್ಮಿ ಸಹಿತ ಪಿಕಪ್ ವಶಕ್ಕೆ

(ನ್ಯೂಸ್ ಕಡಬ) newskadaba.com ಪಂಜ ,ಆ.09: ಪಂಜ ಅರಣ್ಯ ಇಲಾಖಾ ವ್ಯಾಪ್ತಿಯ ಐವತೊಕ್ಲು ಗ್ರಾಮದ ಪುಂಡಿಮನೆ ಎಂಬಲ್ಲಿ ಒಂದು ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಮರದ ದಿಮ್ಮಿ ಸಾಗಾಟ ಪ್ರಕರಣವನ್ನು ಪತ್ತೆ ಹಚ್ಚಿದ ಅರಣ್ಯ ಇಲಾಖೆಯವರು ಮರ ಮತ್ತು ಪಿಕಪ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಪಿಕಪ್ ವಾಹನದಲ್ಲಿ 9 ದಿಮ್ಮಿ ಹಾಗೂ ಸ್ಥಳದಲ್ಲಿ 29 ದಿಮ್ಮಿ ಸೇರಿ ಒಟ್ಟು 38 ದಿಮ್ಮಿಗಳನ್ನು ವಶಪಡಿಸಿಕೊಂಡಿರುವ ಅರಣ್ಯಾಧಿಕಾರಿಗಳು ಆರೋಪಿ ಮುಸ್ತಫಾ ಎಂಬವರನ್ನು ಬಂಧಿಸಿದ್ದಾರೆ. ನಂತರ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ವಶಪಡಿಸಿಕೊಂಡ ಮರದ ಮೌಲ್ಯ ಅಂದಾಜು ಒಂದು ಲಕ್ಷ ರೂಪಾಯಿ ಹಾಗೂ ವಾಹನದ ಮೌಲ್ಯ ಎರಡು ಲಕ್ಷ ರೂಪಾಯಿ ಎನ್ನಲಾಗಿದೆ.

Also Read  ನಿಯಂತ್ರಣ ತಪ್ಪಿದ ಖಾಸಗಿ ಬಸ್ ಮೂರು ವಾಹನಗಳಿಗೆ ಢಿಕ್ಕಿ- ಮೂವರಿಗೆ ಗಾಯ

ಸುಬ್ರಹ್ಮಣ್ಯ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಸ್ಟೀನ್ ಸೋನ್ಸ್ ರವರ ಮಾರ್ಗದರ್ಶನದಲ್ಲಿ ಪಂಜ ವಲಯದ ಅರಣ್ಯಾಧಿಕಾರಿಗಳಾದ ಮಂಜುನಾಥ್ ನೇತೃತ್ವದಲ್ಲಿ,ಉಪ ವಲಯ ಅರಣ್ಯಾಧಿಕಾರಿಗಳಾದ ಸಂತೋಷ್,ಅರಣ್ಯ ರಕ್ಷಕರಾದ ಗೀತಾ ರಾಜೇಶ್,ಅರಣ್ಯ ವೀಕ್ಷಕರಾದ ಮಹೇಶ್, ವಿಜಯಕುಮಾರ್, ಮೋಹನ್ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

error: Content is protected !!
Scroll to Top